ಭದ್ರಾವತಿಯಲ್ಲಿ ಓರ್ವ ಹೆಚ್ ಸಿ ಮತ್ತು ಪಿಸಿ ಅಮಾನತು

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಎರಡು ಠಾಣೆಯ ಪೊಲೀಸ್ ಸಿಬ್ಬಂದಿಗಳನ್ನ ಅಮಾನತುಗೊಳಿಸಲಾಗಿದೆ.  ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಆದೇಶಿಸಿದ್ದಾರೆ.

ಭದ್ರಾವತಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಉಲ್ಲಾಸ್ ಎಂಬುವರನ್ನ ಅಮಾನತುಗೊಳಿಸಿದರೆ, ಬಹಳ ಕುತೂಹಲ ಮೂಡಿಸಿದ್ದ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯ ಗಿರೀಶ್ ರನ್ನ ಅಮಾನತುಗೊಳಿಸಿ ಎಸ್ಪಿ ಅವರು ಇಂದು ಆದೇಶಿಸಿದ್ದಾರೆ.

ಅಪಘಾತಗೊಂಡಿದ್ದ ವಾಹನವನ್ನ ಅದಲು ಬದಲು ಮಾಡಿದ ಪ್ರಕರಣದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಉಲ್ಲಾಸ್ ವಿರುದ್ಧ ಎಸ್ಪಿ ಅವರಿಗೆ ಮಾಹಿತಿ ಹೋಗಿತ್ತು. ಕರ್ತವ್ಯದಲ್ಲಿ ನಿರ್ಲಕ್ಷತೆಯ ಹಿನ್ನಲೆಯಲ್ಲಿ ಅವರನ್ನ ಅಮಾನತುಗೊಳಿಸಲಾಗಿದೆ.

ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ಗೆ ರೌಡಿ ಎಲಿಮೆಂಟ್ಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಅಮಾನತು ಗೊಳಿಸಲಾಗಿದೆ.

ಇದನ್ನೂ ಓದಿ-https://suddilive.in/archives/17783

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close