ಸುದ್ದಿಲೈವ್/ಶಿವಮೊಗ್ಗ
ಅಕ್ರಮ ಮದ್ಯ ಮಾರಾಟದ ವಿರುದ್ಧ ಶಿವಮೊಗ್ಗದ ಗ್ರಾಮಾಂತರ ಭಾಗದಲ್ಲಿ ಮಹಿಳೆಯರು ಸಿಡಿದೆದ್ದಿದ್ದಾರೆ. ಶಿವಮೊಗ್ಗ-ಹೊನ್ನಾಳಿ ರಾಜ್ಯ ರಸ್ತೆ ಹೆಚ್ಚಾರಿಯ ಮದ್ಯೆ ದಿಡೀರ್ ಧರಣಿ ಕೂರುವ ಮೂಲಕ ರಸ್ತೆ ತಡೆ ನಡೆಸಿದ್ದಾರೆ.
ಬೇಡರ ಹೊಸಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯರು ರೋಸಿಹೋಗಿದ್ದಾರೆ. ದಿನಸಿ ಮತ್ತು ಇತರೆ ಅಂಗಡಿಗಳಲ್ಲಿ ಮದ್ಯ ದೊರೆಯುವುದರಿಂದ ಮಹಿಳೆಯರು ಸಿಡಿದೆದ್ದಿದ್ದಾರೆ.
ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಬರಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಅಂತಿಮ ಹಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಬೇಡರಹೊಸಹಳ್ಳಿ ಮತ್ತು ಸುತ್ತುಮುತ್ತ ಗ್ರಾಮಸ್ಥರೇ ದೇವಸ್ಥಾನಗಳಿಂದ ಟೆಂಡರ್ ಕರೆದು ಮದ್ಯ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಿರುವುದು ಮಹಿಳೆಯರನ್ನ ಸಿಟ್ಟಿಗೆಬ್ಬಿಸಿದೆ. ಅದರ ಪರಿಣಾಮವಾಗಿ ಇಂದು ಪ್ರತಿಭಟನೆಗೆ ಕಾರಣವಾಗಿದೆ.
ಮಹಿಳೆಯರ ಈ ಪ್ರತಿಭಟನೆಯಿಂದ ಸುಮಾರು ಅರ್ಧಗಂಟೆಯ ವರೆಗೆ ವಾಹನ ಸವಾರರು ಹರಸಾಹಸ ಪಡುವಂತೆ ಮಾಡಿದೆ.
ಇದನ್ನೂ ಓದಿ-https://suddilive.in/archives/16166