ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಹೊರವಲಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಸಾವು ಕಂಡಿರುವ ಘಟನೆ ತಡ ರಾತ್ರಿ ನಡೆದಿದೆ.
ಶಿವಮೊಗ್ಗದ ಹೊಳೆಬೆನವಳ್ಳಿ ಗ್ರಾಮದ ಬಳಿ ಚನ್ನಗಿರಿ ಕಡೆಯಿಂದ ಶಿವಮೊಗ್ಗ ಬರುತ್ತಿದ್ದ ಬೈಕ್ ಸವಾರ ಶಿವಮೊಗ್ಗಕಡೆಯಿಮದ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಉಂಟಾಗಿದೆ.
ಕೆಎ 14 ಇಯು 7357 ಕ್ರಮ ಸಂಖ್ಯೆಯ ಬೈಕ್ ಮತ್ತು ಕೆಎ 16 ಡಿ 0557 ಕ್ರಮ ಸಂಖ್ಯೆಯ ಸ್ವಿಫ್ಟ್ ಕಾರಿಗೆ ಡಿಕ್ಕಿ ಉಂಟಾಗಿದ್ದು, ಅಪಘಾತದಲ್ಲಿ ಬೈಕ್ ಸವಾರ ಅಸುನೀಗಿದ್ದಾನೆ. ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಅಸುನೀಗಿದ ಯುವಕನನ್ನ ಸಂತೋಷ್ (23) ಎಂದು ತಿಳಿದು ಬಂದಿದೆ. ಈತ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನವನು ಎಂದು ಹೇಳಲಾಗುತ್ತಿದೆ. ಕಾರಿನ ಮುಂಭಾಗ ಮತ್ತುಮುಂಭಾಗದ ಗ್ಲಾಜುಗಳು ಪುಡಿ ಪುಡಿಯಾಗಿವೆ. ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡದಿದೆ.
ಮೃತ ದೇಹವನ್ನ ಶಿವಮೊಗ್ಗದ ಮೆಗ್ಗಾನ್ ಶವಗಾರಕ್ಕೆ ಸಾಗಿಸಲಾಗಿದೆ. ಹಾನಿಯಾದ ಬೈಕ್ ಮತ್ತು ಕಾರನ್ನ ಠಾಣೆಗೆ ತಂದಿರಿಸಲಾಗಿದೆ.
ಇದನ್ನೂ ಓದಿ-https://suddilive.in/archives/16892
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ