ಶುಕ್ರವಾರ, ಜುಲೈ 26, 2024

ಮಳೆಗೆ ಕೋಳಿ ಫಾರಂ ಉಡೀಸ್! 5000 ಕೋಳಿಗಳ ಮಾರಣ ಹೋಮ!





ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಸಮೀಪದ ಸೋಮಿನ ಕೊಪ್ಪ ದಾಟಿ ಇರುವ ಮೋಜಪ್ಪ ಹೊಸೂರು ಗ್ರಾಮದ ಕೋಳಿ ಫಾರಂ ಮಳೆಯ ಕಾರಣದಿಂದ ಸಂಪೂರ್ಣ ಕುಸಿದು ಬಿದ್ದಿದ್ದು, 5 ಸಾವಿರಕ್ಕೂ ಹೆಚ್ಚಿನ ಕೋಳಿಗಳು ಸಾವು ಕಂಡಿವೆ ಎಂದು ತಿಳಿದುಬಂದಿದೆ. 


ಇಮ್ತಿಯಾಝ್ ಅಹಮದ್ ಎಂಬುವವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ಸುಮಾರು 6500ಕ್ಕೂ ಹೆಚ್ಚಿನ ಕೋಳಿಗಳ ಸಾಕಾಣಿಕೆ ಇಲ್ಲಿ ನಡೆಯುತ್ತಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಕೋಳಿ ಫಾರಂನ ಶೆಡ್ ಸಂಪೂರ್ಣ ಕುಸಿದು ಬಿದ್ದಿದೆ.  5500ಕ್ಕೂ ಹೆಚ್ಚಿನ ಕೋಳಿಗಳ ಹೆಣ ಉರುಳಿವೆ. 


ಲಕ್ಷಾಂತರ ರೂ.,ಗಳ ನಷ್ಟ ಸಂಭವಿಸಿದೆ. ಈ ಕುರಿತು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಡ ರೈತನ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಎಳೆದಂತಾಗಿದೆ.


ಇದನ್ನೂ ಓದಿ- https://www.suddilive.in/2024/07/8.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ