ಸುದ್ದಿಲೈವ್/ಶಿವಮೊಗ್ಗ
ಖಾಸಗಿ ಬಸ್ ಚಾಲಕನ ನಿಯಂತ್ರ ತಪ್ಪಿ ರಸ್ತೆ ಬದಿ ಉರುಳಿ ಬಿದ್ದಿದೆ. ಪಿಳ್ಳಂಗೆರೆಯಲ್ಲಿ ನಿನ್ನೆರಾತ್ರಿ ಈ ಘಟನೆ ನಡೆದಿದ್ದು ಬಸ್ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಮನೆ ಮುಂದೆ ನಿಲ್ಲಿಸಿದ್ದ ಓಮಿನಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.
ಶಿವಮೊಗ್ಗ ತಾಲೂಕು ಪಿಳ್ಳಂಗೆರೆಯಲ್ಲಿ ಮಧ್ಯರಾತ್ರಿ ನಡೆದ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಚಾಲಕನಿಗೆ ಸ್ವಲ್ಪ ಹೆಚ್ಚು ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ತಪ್ಪಿದ ಭಾರಿ ಅನಾಹುತ
ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿಯಾಗುತ್ತಿದ್ದಂತೆ ವಿದ್ಯುತ್ ತಂತಿಗಳು ಬಸ್ ಮೇಲೆ ಬಿದ್ದಿತ್ತು. ತಂತಿಯಲ್ಲಿ ಇನ್ನೂ ವಿದ್ಯುತ್ ಪ್ರವಹಿಸುತ್ತಿತ್ತು. ಇದೇ ವೇಳೆ ದಾರಿಯಲ್ಲಿ ತೆರಳುತ್ತಿದ್ದ ಇತರೆ ವಾಹನಗಳ ಪ್ರಯಾಣಿಕರು ಕೂಡಲೆ ರಕ್ಷಣೆಗೆ ಧಾವಿಸಿದ್ದಾರೆ. ವಿದ್ಯುತ್ ಪ್ರವಹಿಸುತ್ತಿರುವುದನ್ನು ಗಮನಿಸಿ ಕೂಡಲೆ ಮೆಸ್ಕಾಂಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಲ್ಲದೆ ಅಪಘಾತಕ್ಕೀಡಾದ ಬಸ್ಸಿನಿಂದ ಗಾಬರಿಯಿಂದ ಇಳಿಯುತ್ತಿದ್ದ ಪ್ರಯಾಣಿಕರಿಗೆ ವಿದ್ಯತ್ ತಂತಿ ಬಗ್ಗೆ ಎಚ್ಚರ ವಹಿಸುವಂತೆ ಕೂಗಿ ತಿಳಿಸಿದ್ದಾರೆ. ಇದರಿಂದ ಅನಾಹುತಗಳನ್ನ ತಪ್ಪಿಸಿದ್ದಾರೆ.
ಅಪಘಾತದ ಸದ್ದು ಕೇಳಿ ಪಿಳ್ಳಂಗೆರೆ ಗ್ರಾಮಸ್ಥರು ಕೂಡ ನೆರವಿಗೆ ಧಾವಿಸಿದರು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತುರ್ತು ನೆರವು ನೀಡಿ, ಆಂಬುಲೆನ್ಸ್‌ಗೆ ಕರೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದಂತೆ ಆಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ-https://suddilive.in/archives/18857
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ