ಸುದ್ದಿಲೈವ್/ಶಿವಮೊಗ್ಗ
ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಕೊಲೆ ಆರೋಪಿಯನ್ನ ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯ ಕೊಲೆ ಆರೋಪಿ ರಜಾಕ್ ಎಂಬುವನು ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಆರೋಪಿ ಅಗಿದ್ದು ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈತನ ಮೇಲೆ 307 ಪ್ರಕರಣ ದಾಖಲಾಗಿತ್ತು. ಈತನ ವಿರುದ್ಧ ಗಾಂಜಾ ಪ್ರಕರಣಗಳು ದಾಖಲಾಗಿವೆ.
ರಜಾಕ್ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ಯಾಜುವಳ್ಳಿಯ ಕಾಡಿನಲ್ಲಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಪತಿ ಅವರಿಗೆ ಮಾಹಿತಿ ಲಭ್ಯವಾಗಿದೆ.
ಆತನನ್ನ ಬಂಧಿಸಲು ಹೊಳೆಹೊನ್ನೂರು ಪಿಐ ಲಕ್ಷ್ಮಿಪತಿ ಮತ್ತು ಸಿಬ್ಬಂದಿ ತೆರಳಿರುತ್ತಾರೆ. ಜೆಪಿ ನಗರ ನಿವಾಸಿಯಾಗಿರುವ ರಜಾಕ್ ಮೇಲೆ ಐದು ಪ್ರಕರಣಗಳಿದ್ದು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು.ಈತ ಅನೇಕ ದಿನಗಳಿಂದ ನ್ಯಾಯಾಲಯಕ್ಕೂ ಹಾಜಾಗಿರಲಿಲ್ಲ. ಆತನನ್ನ ಬಂಧಿಸಿ ಕರೆತರಲು ಹೋದ ಸಿಬ್ಬಂದಿ ಅರ್ಜುನ್ ಮೇಲೆ ರಜಾಕ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ.
ಪಿಐ ಲಕ್ಷ್ಮೀಪತಿಯವರು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸದಂತೆ ಎಚ್ಚರಿಕೆ ನೀಡ್ತಾರೆ. ಒಂದು ಸುತ್ತು ಗುಂಡು ಸಹ ಹಾರಿಸಿರುತ್ತಾರೆ. ಮಾತು ಕೇಳದ ರಜಾಕ್ ಪಿಐ ಲಕ್ಷ್ಮೀಪತಿಯವರ ಮೇಲೆ ಹಲ್ಲೆ ಮಾಡಲು ಮುಂದಾಗ್ತಾನೆ. ತಕ್ಷಣ ಆತನ ಕಾಲಿಗೆ ಗುಂಡು ಹೊಡೆದ ಪೊಲೀಸ್ ಇನ್ ಸ್ಪೆಕ್ಟರ್ ಆತನನ್ನ ರಕ್ಷಣೆ ಮಾಡಿ ಮೆಗ್ಗಾನ್ ಜೈಲ್ ವಾರ್ಡ್ ಗೆ ಹಾಕಲಾಗಿದೆ. ಮೆಗ್ಗಾನ್ ಗೆ ಆತನನ್ನಬೆಳಿಗ್ಗೆ 6-30 ಕ್ಕೆ ತಂದು ದಾಖಲಿಸಲಾಗಿದೆ. ಗಾಯಾಳು ಸಿಬ್ಬಂದಿ ಅರ್ಜುನ್ ಸಹ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ-https://suddilive.in/archives/18836
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ