ಮಂಗಳವಾರ, ಜುಲೈ 9, 2024

ಹಳ್ಳಕ್ಕೆ ಇಳಿದ ಕಾರು-ಚಾಲಕ ಪರಾರಿ-ನಾಲ್ವರು ಮೆಗ್ಗಾನ್ ಗೆ ದಾಖಲು

ಸುದ್ದಿಲೈವ್/ಶಿವಮೊಗ್ಗ

ಸಾಗರದ ಸಿಗಂದೂರು ದೇವಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಸ್ವಿಫ್ಟ್ ಕಾರೊಂದು ಆಯನೂರು ಬಳಿ ಹಳ್ಳಕ್ಕೆ ಇಳಿದಿದೆ. ಕಾರಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನ ಮೆಗ್ಗಾನ್ ಗೆ ದಾಖಲಾಗಿದ್ದು ಚಾಲಕ ಪರಾರಿಯಾಗಿದ್ದಾನೆ.

ಬೆಂಗಳೂರಿನಿಂದ ಸಿಗಂದೂರು ದೇವಸ್ಥಾನಕ್ಕೆ ಚೌಡೇಶ್ವರಿ ದೇವಿಯ ದರ್ಶನ ಪಡೆಯಲು ತಡರಾತ್ರಿ ನಾಲ್ವರು ಸ್ವಿಫ್ಟ್ ಡಿಸೇರ್ ಕಾರಿನಲ್ಲಿ ಹೊರಟಿದ್ದರು. ಶಿವಮೊಗ್ಗ ದಾಡಿ ಆಯನೂರಿನ ಬಳಿ ಹಳ್ಳಕ್ಕೆ ಕಾರು ಇಳಿದಿದೆ.

ಕಾರಿನ ಚಾಲಕನಿಗೆ ನಿದ್ದೆ ಬಂದ ಹಿನ್ನಲೆಯಲ್ಲಿಈ ಅವರಘಡ ಸಂಭವಿಸಿದೆ ಎಂದು‌ಹೇಳಲಾಗುತ್ತಿದೆ. ನಿದ್ದೆಯ ಮಂಪ್ರುವಿನಲ್ಲಿ ಹಳ್ಳಕ್ಕೆ ಇಳಿಸಿದರೂ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಹಳ್ಳಕ್ಕೆ ಇಳಿದ ಕಾರಿನಿಂದ ಓರ್ವ ಮಹಿಳೆ ಹಳ್ಳದಲ್ಲಿ ಕುಳಿತಿದ್ದ ದೃಶ್ಯ ಲಭ್ಯವಾಗಿದೆ.

ಚಾಲಕ ಪರಾರಿಯಾಗಿದ್ದಾನೆ. ನಾಲ್ವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ಬೂ ಓದಿ-https://suddilive.in/archives/18842

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ