ಮಂಗಳವಾರ, ಜುಲೈ 9, 2024

ಕೆಯುಡಬ್ಲೂಜೆ ತಾಲೂಕು ಸಂಘದ ಅಧ್ಯಕ್ಷರಾಗಿ ಬಿಅರ್.ಬದರಿನಾರಾಯಣ ಶ್ರೇಷ್ಠಿ ಅಯ್ಕೆ

ಸುದ್ದಿಲೈವ್/ಭದ್ರಾವತಿ ಜು‌ 09 :-

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಸಂಘದ ಅಧ್ಯಕ್ಷರಾಗಿ ಬಿಅರ್.ಬದರಿನಾರಾಯಣ ಶ್ರೇಷ್ಠಿ ಅಯ್ಕೆಯಾಗಿದ್ದರೆ ಎಂದು ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷರಾದ ಕೆವಿ. ಶಿವಕುಮಾರ್ ಘೋಷಿಸಿದರು.

ಭಾನುವಾರ ನಗರದ ಪತ್ರಿಕಾ ಭವನ ಟ್ರಸ್ಟ್‌ ನ ಸಭಾಂಗಣದಲ್ಲಿ ತಾಲೂಕು ಸಂಘದ ಸಭೆಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಭದ್ರಾವತಿ ಸಂಘವು ಪ್ರಥಮವಾಗಿ ಸಾರ್ವಜನಿಕ ಮತ್ತು ಸಂಘದ ಉದ್ದೇಶಗಳಿಗಾಗಿ ಕಟ್ಟಡವನ್ನು ನಿರ್ಮಿಸಿದ ಹೆಗ್ಗಳಿಕೆ ತಾಲೂಕು ಸಂಘಕ್ಕೆ ಸಲ್ಲುತ್ತದೆ ಎಂದು ಹರ್ಷಿಸಿದರು. ಅಲ್ಲದೆ ಸ್ಥಳೀಯ ಸಂಘವು ರಾಜ್ಯದ ಇತರೆ ಸಂಘಗಳಿಗೆ ಮಾದರಿಯಾಗಿದೆ ಎಂದರು. ಸಂಘದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಬರದ ರೀತಿಯಲ್ಲಿ ತನ್ನ ಬಿಗಿ ಉಳಿಸಿಕೊಂಡಿದೆ ಎಂದರು.

ಸಂಘ ಕಟ್ಟುವುದು ಸುಲಭವಾದರು ಮುನ್ನಡೆಸುವುದು ಕಷ್ಟಸಾಧ್ಯದ ಕೆಲಸ ಎಂದು ತಿಳಿಸಿ ಪತ್ರಕರ್ತರೆಲ್ಲರೂ ಅನುಕೂಲ ರಾಗಿರುವುದಿಲ್ಲ, ಅವರಿಗೆ ಅವರ ಕುಟುಂಬಕ್ಕೆ ಅನುಕೂಲವಾಗಲು ನಿವೇಶಣದ ಅವಶ್ಯಕತೆ ಇದ್ದು ಅ ನಿಟ್ಟಿನಲ್ಲಿ ಸಂಘ ಪ್ರಯತ್ನಿಸಲಿ ತಾವು ಸಹಕಾರ ನೀಡುವುದಾಗಿ ತಿಳಿಸಿದರು.

ಬದರಿನಾರಾಯಣ ಶ್ರೇಷ್ಠಿಯವರು ಸಹಾ ಹಿರಿಯ ಸದಸ್ಯರಾಗಿ ತಾಲೂಕು ಸಂಘದ ಪ್ರತಿಯೊಂದು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪತ್ರಿಕಾರಂಗ ಕೇವಲ ಸೇವಾಮನೋಬಾವನೆಯೆ ಹೊರತು ಅದಾಯ ತರುವ ಹುದ್ದೆಯಲ್ಲ ಅದ್ದರಿಂದ ಸಂಘವು ತನ್ನ ಸದಸ್ಯರಿಗೆ ಸಾಧ್ಯವಾದಷ್ಟು ಸಹಕಾರ ನೀಡಲಿ, ಬದರಿನಾರಾಯಣ ರವರು ತಮ್ಮ ಅಧ್ಯಕ್ಷರ ಅವಧಿಯಲ್ಲಿ ಸಾಧ್ಯವಾದಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ ಕಳೆದೆರಡು ಅವಧಿಯ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರು ತದನಂತರ ಭಿನ್ನಭಿಪ್ರಾಯಗಳು ತಲೆದೂರದಂತೆ ಸಂಘದ ಸದಸ್ಯರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗಿದೆ. ಕಖೆದ ಚುನಾವಣೆಯಲ್ಲಿ ಬದರಿನಾರಾಯಣ ಶ್ರೇಷ್ಠಿ ಅಲ್ಪ ಮತಗಳಿಂದ ಪರಾಭವರಾದರು ಛಲಬಿಡದೆ ಇಂದು ಅಧ್ಯಕ್ಷರಾದರು ಎಂದು ಹರ್ಷ ವ್ಯಕ್ತ ಪಡೆಸಿದರು. ತಾಳ್ಮೆಯಿಂದ ಇದ್ದಲ್ಲಿ ಮುಂದೊದು ದಿನ ಒಳ್ಳೆಯ ಹುದ್ದೆ ನಿಶ್ಚಿತ ಎಂದರು

ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್ ಮಾತನಾಡಿ ಸಂಘದ ಸದಸ್ಯರಲ್ಲಿ ಭಿನ್ನಭಿಪ್ರಾಯ ಇರದ ಕಾರಣ ಸಂಘ ಸುಗುಮವಾಗಿ ಸಾಗುತ್ತೀದೆ. ಇದರಿಂದಾಗಿ ಜಿಲ್ಲೆ ಮತ್ತು ರಾಜ್ಯ ಸಂಘಗಳು ನಿಶ್ಚಂತೆಯಾಗಿವೆ. ರಾಜ್ಯ ಮತ್ತು ಜಿಲ್ಲಾ ಸಮಿತಿಗಳು ಸದಾ ತಾಲೂಕು ಸಂಘಗಳ ಅಭಿವೃದ್ಧಿ ಯನ್ನು ಬಯಸುತ್ತವೆ. ಅದರೊಂದಿಗೆ ತಾಲೂಕು ಸಂಘದಲ್ಲಿ ಪದಾಧಿಕಾರಿಯಾಗಲು ಬಯಸುವುದು ಸಹಜ ಅದರೆ ಅರ್ಹವ್ಯಕ್ತಿ ಅನುಭವಿ ಮತ್ತು ಸಂಘದ ಶ್ರೇಯೋಭಿವೃದ್ದಿಯ ಬಗ್ಗೆ ಚಿಂತಿಸುವರಾಗಿರಬೇಕು ಇದರಿಂದ ಸಂಘ ಮಾದರಿಯಾಗುವುದು ಎಂದರು. ಯಾವುದೇ ಸಹಕಾರಕ್ಕೆ ಜಿಲ್ಲಾ ಮತ್ತು ರಾಜ್ಯ ಸಂಘದವರನ್ನು ಅಗಾಗ್ಗೆ ಸಂಪರ್ಕಿಸುತ್ತೀರಿ ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿದ್ದ ಜಿಲ್ಲಾ ಸಂಘದ ಉಪಾಧ್ಯಕ್ಷ ವೈದ್ಯ ಮಾತನಾಡಿ ತಾಲೂಕು ಸಂಘ ಪ್ರಬಲವಾಗಿ ಬೆಳೆಯಬೇಕು ಇದರಿಂದ ಜಿಲ್ಲಾ ಮತ್ತು ರಾಜ್ಯ ಸಂಘಗಳಿಗೆ ಬಲ ಬಂದತಾಗುವುದು. ತಾಲೂಕು ಸಂಘದ ಸದಸ್ಯರು ಜಿಲ್ಲೆ ಮತ್ತು ರಾಜ್ಯ ಸಂಘಗಳ ಸಮಿತಿಯಲ್ಲಿ ಸೇರ್ಪಡೆಯಾಗಬೇಕು ಎಂದರು.

ವೇದಿಕೆಯಲ್ಲಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಮಾತನಾಡಿ ರಾಜ್ಯ ಮತ್ತು ಜಿಲ್ಲಾ ಸಮಿತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಲ್ಲಿ ಪತ್ರಕರ್ತ ಸದಸ್ಯರಿಗೆ ಸಿಗುವ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ದೊರೆಯುವುದು. ಶೀಘ್ರವಾಗಿ ಪತ್ರಕರ್ತರಿಗೆ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಲು ಪಾಸ್ ದೊರೆಯಲಿದೆ. ಈ ಸಂಬಂಧ ರಾಜ್ಯ ಸಮಿತಿ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೀದೆ ಎಂದರು.

ನೂತನ ಅಧ್ಯಕ್ಷ ಬಿಅರ್. ಬದರಿನಾರಾಯಣ ಶ್ರೇಷ್ಠಿ ಮಾತನಾಡಿ ತಾಲೂಕು ಸಂಘದ ಸದಸ್ಯರು ಒಮ್ಮತದ ನಿಲುವು ಕಾಣಲು ಕಾರಣ ಸಂಘದ ಹಿರಿಯರ ಪರಿಶ್ರಮ ಇದೆ. ಇದರಿಂದಾಗಿ ಸಂಘ ಸುದೃಢವಾಗಿದೆ. ಇಂತಹ ಭವನವೆ ಸಾಕ್ಷಿಯಾಗಿದೆ ಎಂದರು. ತಮಗೆ ಪತ್ರಿಕಾ ರಂಗದಲ್ಲಿ ಮೂವತ್ತು ವರ್ಷಗಳ ಕಾರ್ಯ ನಿರ್ವಹಿಸಿದ ಅನುಭವವಿದೆ. ಹಾಗೂ ಹಿರಿಯರ ಮತ್ತು ಸ್ನೇಹಿತರ ಸಹಕಾರವಿದೆ ಮುಂದಿನ ದಿನಗಳಲ್ಲಿ ಸದಸ್ಯರ ಅಶೋತ್ತರ ಅರಿತು ನಡೆರುಕೊಳ್ಳುವುದಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದಸಂಘದ ಉಪಾಧ್ಯಕ್ಷ ಸಭೆಯ ಪ್ರಭಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ ತಾವು ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿದ್ದರೂ, ಸಂಘದ ಹಿರಿಯರ ಮಾತಿಗೆ ಬೆಲೆಕೊಟ್ಟು ತಾವೆಲ್ಲರೂ ಸೇರಿ ಸಂಘ ಮತ್ತು ಭವನವನ್ನು ಬೆಳೆಸೋಣ ಎಂಬ ಭಾವನೆಯಿಂದ ಕಣದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದರು.

ಪ್ರಸ್ತುತ ಅವಧಿಗೆ ಅಧ್ಯಕ್ಷ ರಾಗಿದ್ದ ಕೆಎನ್. ಶ್ರೀಹರ್ಷರ ರಾಜೀನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುದ ಬದರಿನಾರಾಯಣ ಶ್ರೇಷ್ಠಿಯವರನ್ನು ಅಭಿನಂದುಸಲಾಯಿತು.

ಜಯಶ್ರೀ ಗೋವಿಂದರಾಜ ಗುಪ್ತ ಪ್ರಾರ್ಥಸಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿ ನಿರೂಪಿಸಿ, ಖಜಾಂಜಿ ಅನಂತ ಕುಮಾರ್ ವಂದಿಸಿದರು. ಸಹಕಾರ್ಯದರ್ಶಿ ಫಿಲೋಮಿನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರ್ಯವೈಶ್ಯ ಸಮಾಜದ ಪದಾಧಿಕಾರಿಗಳು,ನಿರ್ದೇಶಕರು ಮತ್ತು ಬಾಂಧವರು ನೂತನ ಅಧ್ಯಕ್ಷ ಬದರಿನಾರಾಯಣ ಶ್ರೇಷ್ಠಿಯನ್ನು ಸನ್ಮಾನಿಸುದರು.

ಇದನ್ನೂ ಓದಿ-https://suddilive.in/archives/18830

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ