ಸುದ್ದಿಲೈವ್/ಭದ್ರಾವತಿ
ಕಳೆದ ತಿಂಗಳು ಜೂ.17 ರಂದು ರಾತ್ರಿ ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಓಎಸ್ಎಂ ರಸ್ತೆಯ ಶ್ರೀ ಮಂಜುನಾಥ ಆಟೋ ಸ್ಪೇರ್ಸ್ ಅಂಗಡಿಯ ರೋಲಿಂಗ್ ಶೆಟರ್ ನ ಲಾಕ್ ಮುರಿದು ಹಣ ಕಳುವು ಮಾಡಿದ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ.
ಆಯುಧದ ಸಹಾಯದಿಂದ ಅಂಗಡಿಯ ರೋಲಿಂಗ್ ಶೆಡ್ ನ್ನ ಮೀಟಿ ಒಳಗೆ ಹೋಗಿ ಡ್ರಾ ನಲ್ಲಿ ಇಟ್ಟಿದ್ದ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಹಳೇನಗರ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ, ಮತ್ತು ಕಾರಿಯಪ್ಪ ಎ.ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಗಜಾನನ ವಾಮನ ಸುತಾರ ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ ಪ್ರಭಾರ ಮತ್ತು ಶೈಲಕುಮಾರ್, ವೃತ್ತ ನಿರೀಕ್ಷಕರು ನಗರ ವೃತ್ತ ಭದ್ರಾವತಿ ರವರ ಮೇಲ್ವಿಚಾರಣೆಯಲ್ಲಿ ಶರಣಪ್ಪ ಹೆಚ್, ಪಿಎಸ್ಐ ಹಳೆನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ಹೆಚ್ ಸಿ ಹಾಲಪ್ಪ, ಪಿಸಿ ನಾರಾಯಣ ಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಎಸ್ ಮತ್ತು ಪ್ರವೀಣ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಸದರಿ ತನಿಖಾ ತಂಡವು ದಿನಾಂಕಃ 08-07-2024 ರಂದು ಪ್ರಕರಣದ ಆರೋಪಿಗಳಾದ 1) ಸೈಯದ್ ಹಸೇನ್ @ ಜಂಗ್ಲಿ, 19 ವರ್ಷ, ಯಕಿನ್ಸಾ ಕಾಲೋನಿ ಭದ್ರಾವತಿ ಮತ್ತು 2) ಸೈಯದ್ ಇರ್ಫಾನ್ @ ಕಾಲು, 21 ವರ್ಷ, ಯಕಿನ್ಸಾ ಕಾಲೋನಿ ಭದ್ರಾವತಿ ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಪ್ರಕರಣದಲ್ಲಿ ಕಳ್ಳತನ ಮಾಡಿಕೊಂಡು ಹೋದ ನಗದು ಹಣ ರೂ 40,000/- ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ತನಿಖಾ ತಂಡದ ಉತ್ತಮವಾದ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/18822
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ