ಸುದ್ದಿಲೈವ್/ತೀರ್ಥಹಳ್ಳಿ/ಶಿವಮೊಗ್ಗ
ಶಿವಮೊಗ್ಗದಲ್ಲಿ ಮಳೆಗೆ ಎರಡು ಮನೆಗಳು ಹಾನಿಗೊಲಗಾಗಿವೆ. ಹಾರನಹಳ್ಳಿಯಲ್ಲಿ ನವೀದ್ ಎಂಬುವರ ಮನೆ ಹಾನಿಗೊಳಗಾದರೆ ತೀರ್ಥಹಳ್ಳಿಯಲ್ಲಿ ಮಹಿಳೆಯರ ಮನೆ ಹಾನಿಗೊಳಗಾಗಿದೆ.
ತೀರ್ಥಹಳ್ಳಿಯ ವರ್ಣಾರ್ಭಟಕ್ಕೆ ಮನೆಯ ಗೊಡೆ ಕುಸಿದು ಬಿದ್ದಿದೆ. ವಾಸದ ಮನೆಯ ಗೋಡೆಗಳು ಕುಸಿದಿದ್ದು ಮನೆಯ ಮಾಲೀಕರು ಕಂಗಾಲಾಗಿದ್ದಾರೆ.
ಕಸಬಾ ಹೋಬಳಿ ಒಡಲಮನೆ ಗ್ರಾಮದ ಹನುಮಮ್ಮ ಅವರ ಮನೆಯ ಗೋಡೆ ಕುಸಿದಿದೆ. ಮಳೆಯ ತಂಡಿಗೆ ಮನೆಗಳು ಉರುಳಲು ಆರಂಭವಾಗಿದೆ. ಪರಿಹಾರಕ್ಕೆ ಸಂತ್ರಸ್ತರು ತಾಲೂಕು ಆಡಳಿತದ ಕಚೇರಿ ಬಾಗಿಲು ತಟ್ಟಲಾರಂಭಿಸಿದ್ದಾರೆ.
ಇದನ್ನೂ ಓದಿ-https://suddilive.in/archives/19395
Tags:
ಕ್ರೈಂ ನ್ಯೂಸ್