ಮಂಗಳವಾರ, ಜುಲೈ 16, 2024

ಪ್ರೀತಿ, ಪ್ರೇಮ ಮತ್ತು ಲೈಂಗಿಕ ಕಿರುಕುಳ

ಸುದ್ದಿಲೈವ್/ಶಿವಮೊಗ್ಗ

ಪರಿಚಯಸ್ಥ ಯುವತಿಯನ್ನ‌ ನಾಲ್ಕು ವರ್ಷ ಪ್ರೀತಿಸಿ ಬೇಸರವಾದ ಮೇಲೆ ಮತ್ತೊಂದು ಯುವತಿಯನ್ನ ಪ್ರೀತಿಸುತ್ತಿದ್ದ ಪ್ರಿಯತಮೆಯೊಬ್ಬ ತನ್ನ ಎಕ್ಸ್ ಲವರ್ ಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ  ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೆಎನ್ ಸಿಇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ತಮಗೆ ಪರಿಚಯಸ್ಥನಾಗಿದ್ದ ಯುವಕನ ಜೊತೆಗೆ ಕಳೆದನಾಲ್ಕು ವರ್ಷದಿಂದ  ಪ್ರೀತಿ ಮತ್ತು ಪ್ರೇಮ ಬೆಳೆದಿತ್ತು.

ಯುವತಿ ಆತನ ಪ್ರೀತಿ ಕ್ರಮೇಣ ನಾಟಕವಾಗಿ ತಿರುವು ಪಡೆದುಕೊಂಡಿತ್ತು ಎಂದು  ಆರೋಪಿಸಿದ್ದಾಳೆ. ತಾನುಬೇಸರವಾದ ಮೇಲೆ  ಆತ ಬೇರೊಂದು ಯುವತಿಯನ್ನ ಪ್ರೀತಿಸುತ್ತಿದ್ದು ಇದನ್ನ ಪ್ರಶ್ನಿಸಿದ್ದಕ್ಕೆ ಕಿವಿ ತಮಟೆ ಹರಿದು ಹೋಗುವಂತೆ ಹಲ್ಲೆನಡೆಸಿರುವುದಾಗಿಯೂ ಆರೋಪಿಸಿದ್ದಾಳೆ.

ಇತ್ತೀಚೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತಂದೆಯಜೊತೆ ಹೋಗುತ್ತಿದ್ದಾಗ ಎಕ್ಸ್ ಬಾಯ್ ಫ್ರೆಂಡ್ ತನ್ನ ಗರ್ಲ್ ಫ್ರೆಂಡ್ ಜೊತೆ ಬಂದು ಕಿಚಾಯಿಸಿರುವುದಾಗಿ ಯುವತಿ ದೂರಿದ್ದಾಳೆ..

ಕಿಚಾಯೊಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಯುವತಿಯನ್ನ ಹಲ್ಲೆ ನಡೆಸಿದ್ದಾರೆ ಮತ್ತು ಮಗಳನ್ನಯಾಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ ತಂದೆಯ ಮೇಲೂ ಕೈ ಮಾಡಲಾಗಿದೆ. ಎಕ್ಸ್ ಬಾಯ್ ಫ್ರೆಂಡ್ ಯಾವಾಗಲೂ ಕಿಚಾಯಿಸುವುದು ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ-https://suddilive.in/archives/19402

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ