ಸುದ್ದಿಲೈವ್/ತೀರ್ಥಹಳ್ಳಿ
ಕೊಟ್ಟಿಗೆಯಲ್ಲಿಟ್ಟದ್ದ 80 ಸಾವಿರ ರೂ. ಮೌಲ್ಯದ 4 ಕ್ವಿಂಟಲ್ ಸಿಪ್ಪೆಗೋಟು ಅಡಿಕೆಯನ್ನ ಕಳುವು ಮಾಡಿದ ಪ್ರಕರಣವನ್ನ ಮಾಳೂರು ಪೊಲೀಸರು ಬೇಧಿಸಿ, ಆರೋಪಿಯನ್ನ ಬಂಧಿಸಿ ಕಳುವು ಮಾಲನ್ನ ವಾಪಾಸ್ ಪಡೆದಿದ್ದಾರೆ.
ಮೇ.20 ರಂದು ರಾತ್ರಿ ತೀರ್ಥಹಳ್ಳಿ ತಾಲೂಕು ಕರಕುಚ್ಚಿ ಗ್ರಾಮದ ನಿವಾಸಿ ದೇವದಾಸ ಅವರು ಕೊಟ್ಟಿಗೆ ಮನೆಯಲ್ಲಿ ಇಟ್ಟಿದ್ದ ಅಂದಾಜು 80,000/- ರೂ ಮೌಲ್ಯದ 04 ಕ್ವಿಂಟಲ್ ಸಿಪ್ಪೆಗೋಟು ಅಡಿಕೆಯನ್ನು ಕಳವು ಮಾಡಲಾಗಿತ್ತು. ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಳುವಾದ ಅಡಿಕೆ ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಮತ್ತು ಕಾರಿಯಪ್ಪ ಎ.ಜಿರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತರ, ಮಾಳೂರು ಸಿಪಿಐ ಶ್ರೀಧರ್ ಕೆರವರ ಮೇಲ್ವಿಚಾರಣೆಯಲ್ಲಿ ಪಿಎಸ್ಐ-1 ಕುಮಾರ ಕೂರಗುಂದ, ಶಿವಾನಂದ ದರೇನವರ್ ಪಿ.ಎಸ್.ಐ-2 ರವರ ನೇತೃತ್ವದಲ್ಲಿ ಹೆಚ್.ಸಿ. ಸುರಕ್ಷಿತ, ರಾಜಶೇಖರ ಶೆಟ್ಟಿಗಾರ್, ಮಂಜುನಾಥ, ಲೋಕೇಶ ಮತ್ತು ಪಿ.ಸಿ. ರವರಾದ ಪ್ರದೀಪ, ಸಂತೋಷ, ಪುನೀತ, ಚೇತನ, ಮತ್ತು ಎಪಿಸಿ ಅಭಿಲಾಷ ರವರ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ಇಂದು ಪ್ರಕರಣದ ಆರೋಪಿಯಾಗಿರುವ ಶಿಕಾರಿಪುರ ತಾಲೂಕು ಹರಗುವಳ್ಳಿ ಹನುಮಂತಪ್ಪ ಜಿ.ವೈ, (24)ಯನ್ನ ಬಂಧಿಸಲಾಗಿದೆ. ಆರೋಪಿಯಿಂದ ಅಂದಾಜು ಮೌಲ್ಯ 80,000/- ರೂ ಮೌಲ್ಯದ 3 ಕ್ವಿಂಟಲ್ 95 ಕೆ.ಜಿ. ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ-https://www.suddilive.in/2024/07/blog-post_680.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ