ಸುದ್ದಿಲೈವ್/ತೀರ್ಥಹಳ್ಳಿ
ಆಗುಂಬೆ ಘಾಟಿಯಲ್ಲಿ ಓಮಿನಿ ಕಾರ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ನಡೆದಿದೆ.
ಆಗುಂಬೆಯ ನಾಲ್ಕನೆ ತಿರುವಿನಲ್ಲಿ ಈ ಘಟನೆ ಜರುಗಿದ್ದು ಮರ ಬಿದ್ದ ಪರಿಣಾಮ ಓಮಿನಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಇದ್ದ ಸವಾರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ನಾಲ್ಕನೇ ತಿರುವಿನಲ್ಲಿ ಮರ ಬಿದ್ದ ಪರಿಣಾಮ ಸಂಚಾರ ಬಂದ್ ಆಗಿದ್ದು ಮರ ತೆರವುಗೊಳಿಸುವ ವರೆಗೂ ಸಂಚಾರ ಅಸ್ತವ್ಯಸ್ತ ವಾಗಲಿದೆ. ಮರ ತೆರವುಗೊಳಿಸಲು ಸ್ಥಳೀಯರು ಹರ ಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ-https://suddilive.in/archives/18488
Tags:
ಕ್ರೈಂ ನ್ಯೂಸ್