ಆರಿದ್ರಾ ಮಳೆಗೆ ಯಕ್ಷಗಾನ ಕಲಾವಿದನ‌ಮನೆ ಕುಸಿತ

ಸುದ್ದಿಲೈವ್/ತೀರ್ಥಹಳ್ಳಿ

ತಾಲೂಕಿನಲ್ಲಿ ಆರಿದ್ರಾ ಮಳೆಯ ಅಬ್ಬರ ಹೆಚ್ಚಾಗಿದ್ದು ಅದರಲ್ಲೂ ಆಗುಂಬೆ ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು

ಹೋನ್ನೆತಾಳು ಗ್ರಾಮದ ಯಕ್ಷಗಾನ ಕಲಾವಿದನ ಮನೆ ಗಾಳಿ ಮಳೆಗೆ ತಡ ರಾತ್ರಿ ಕುಸಿದು ಬಿದ್ದಿದೆ.

ನಂದನ್ ಶೆಟ್ಟಿ ಎಂಬ ಯಕ್ಷಗಾನ ಕಲಾವಿದ ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿನ್ನೆ ಮಂದಾರ್ತಿಯಲ್ಲಿ ಮೇಳದ ಆಟದಲ್ಲಿ ಭಾಗಿಯಾಗಿದ್ದರು. ತಾಯಿ ಭಾರತಿ ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು.
ಈ ಸಂದರ್ಭದಲ್ಲಿ ರಾತ್ರಿ ಭಾರಿ ಮಳೆಗೆ ಮನೆ ಕುಸಿದಿದೆ.

ಮಂದಾರ್ತಿ ಮೇಳದಲ್ಲಿ ಕಲಾವಿದನಾಗಿರುವ ನಂದನ್ ಶೆಟ್ಟಿ ಕಡು ಬಡ ಕುಟುಂಬದವರಾಗಿದ್ದು ಇರಲು ಬೇರೆ ಮನೆ ಇಲ್ಲದೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನೆಯನ್ನು ಒದಗಿಸಿ ಕೊಡಬೇಕಾಗಿ ಸ್ಥಳೀಯರು ವಿನಂತಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ತಕ್ಷಣ ಧಾವಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ್ ಹಾಗೂ ಸ್ಥಳೀಯ ಯುವಕರು ಇವರಿಗೆ ಸಹಕಾರ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/18495

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close