ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯ ಹೊಸನಗರ ತಾಲೂಕಿನ ಬೈಸೆ ಗ್ರಾಮದ ಮಹಿಳೆಯೋರ್ವಳು ಕಾಲುಸಂಕ ದಾಟುವಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದು ಸಾವುಕಂಡ ಘಟನೆ ನಡೆದಿದೆ.
ಶಶಿಕಲಾ ಎಂಬ (43) ಮಹಿಳೆ ಇವತ್ತು ಬೆಳಗ್ಗೆ ತಮ್ಮ ಗದ್ದೆ ಹೋಗುತ್ತಿದ್ದ ಮಹಿಳೆ ಹಳ್ಳಕ್ಕೆ ಅಡ್ಡಲಾಗಿ ಹಾಕಿದ್ದ ಕಾಲು ಸಂಕ ದಾಟುವಾಗ ಜಾರಿ ಹಳ್ಳಕ್ಕೆ ಬಿದ್ದಿದ್ದಾರೆ. ಮಹಿಳೆ ಹಳ್ಳದಲ್ಲಿ ಬಿದ್ದು ಕೊಚ್ಚಿ ಹೋದ ಬಳಿಕ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಮಹಿಳೆಯ ಶವ ಪತ್ತೆಯಾಗಿದೆ.
ಮೃತಳನ್ನು ತಾಲೂಕಿನ ಬೈಸೆ ಗ್ರಾಮದ ಚಿಕಳಿ ನಿವಾಸಿ ಶಶಿಕಲಾ ಎಂದು ಗುರುತಿಸಲಾಗಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣವೂ ದಾಖಲಾಗಿದೆ.
ಬೈಸೆ ಗ್ರಾಮದ ಬಳಿಯಲ್ಲಿ ಜಾಮಿಜೆಡ್ಡು ಗುಡ್ಡದಿಂದ ಹರಿದು ಬಂದ ಮಳೆ ನೀರು ಹಳ್ಳದ ರೀತಿಯಲ್ಲಿ ನಿರ್ಮಾಣಗೊಂಡಿದೆ. ಅಕ್ಕಪಕ್ಕದ ರೈತರು ಈ ಹಳ್ಳಕ್ಕೆ ಅಡ್ಡಲಾಗಿ ಅಡಿಕೆ ದಬ್ಬೆ ಬಳಸಿ ಸಾರ ಅಥವಾ ಸಂಕ ಕಟ್ಟಿ ತಮ್ಮ ತಮ್ಮ ಹೊಲಕ್ಕೆ, ತೋಟಕ್ಕೆ ಹೋಗಲು ಬಳಸುತ್ತಾರೆ.
ಅದೇ ರೀತಿ ಶಶಿಕಲಾ ಸಹ ಇವತ್ತು ಅವರು ಬೆಳಗ್ಗೆ ಒಂಬತ್ತು ಗಂಟೆಗೆ ಜಮೀನಿನ ಹತ್ತಿರ ಹೋಗಿ ಅಗೆ ಹಾಕಲು ಸಿದ್ಧತೆ ನೋಡಿಕೊಂಡು ಬರಲು ಹೋರಟಿದ್ದರು. ಆ ಬಳಿಕ ಮನೆಗೆ ಅವರು ವಾಪಾಸ್ ಮನೆಗೆ ಬಂದಿರಲಿಲ್ಲ.
ಹೀಗಾಗಿ ಮನೆಯವರು ಶಶಿಕಲಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಕಾಲು ಸಂಕದಿಂದ ಹಳ್ಳದಲ್ಲಿ ಮುಂದೆ ಹುಡುಕುತ್ತಾ ಹೋದ ಮನೆಯವರಿಗೆ ಒಂದು ಕಿಲೋಮೀಟರ್ ದೂರದಲ್ಲಿ ಮೃತದೇಹ ಸಿಕ್ಕಿದೆ. ದುಮುಕದ ಗದ್ದೆ ಕಾಲು ಸೇತುವೆ ಹತ್ತಿರ ಹಳ್ಳದಲ್ಲಿ ಶಶಿಕಲಾ ರವರ ಮೃತದೇಹ ಮರಕ್ಕೆ ಸಿಕ್ಕಿ ಹಾಕಿಕೊಂಡಿತ್ತು. ಇದನ್ನ ನೋಡಿದ ಮನೆಯವರು ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ.
ಈ ಕಾಲು ಸಂಕ ನಿರ್ಮಾಣದ ಕುರಿತು ಎಂಎಡಿಬಿಯಲ್ಲಿ ರಾಜಕೀಯ ನಾಯಕರು ಸಭೆ ಮೇಲೆ ಸಭೆ ನಡೆಸಿದ್ದೇ ಬಂತು. ಮಹಿಳೆಯ ಜೀವ ಉಳಿಸಲಾಗಿಲ್ಲ. ಈ ಚಂದಕ್ಕೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಬೇಕಾ ಎಂಬ ಪ್ರಶ್ನೆಯೂ ಮೂಡಲಾರಂಭಿಸಿದೆ.
ಇದನ್ನೂ ಓದಿ-https://suddilive.in/archives/18500