ಇಮಾಮ್ ಬಾಡಾದ ನದಿ ದಂಡೆ |
ಬೈಪಾಸ್ ರಸ್ತೆಯ ಸೇತುವೆ |
ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯಲ್ಲಿ ಮಳೆಯ ಮುನ್ಸೂಚನೆ ಇದೆ. ಆದರೆ ನಗರದಲ್ಲಿ ಬಿಸಿಲು ಬೀಳುತ್ತಿದೆ. ಆದರೆ ತುಂಗ ನದಿ ಅಪಾಯಮಟ್ಟದಲ್ಲೇ ಹರಿಯತ್ತಿದೆ. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನದಿಗೆ ಬಿಟ್ಟಿರುವ ರಾಜಾಕಾಲುವೆಯಲ್ಲಿ ಡ್ರೈನೇಜ್ ನೀರು ಬಡಾವಣೆಗೆ ನುಗ್ಗುತ್ತಿವೆ.
ಕೂಡಲಿಯಲ್ಲಿ ಸ್ನಾಘಟ್ಟಕ್ಕೆ ಇಳಿಯದಂತೆ ತಡೆ |
82 ಸಾವಿರ ಕ್ಯೂಸೆಕ್ ನೀರು ತುಂಗೆಯಲ್ಲಿ ಹರಿದು ಬರುತ್ತಿದೆ. ಅದರಂತೆ ಭದ್ರ ನದಿಗೂ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಭದ್ರ ನದಿ ಭದ್ರಾವತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ.
ಎರಡೂ ನದಿ ಕೂಡಲಿಯಲ್ಲಿ ಸೇರುವುದರಿಂದ ಹಿಂದೂ ಸಂಪ್ರದಾಯದಂತೆ ಕೂಡಲಿ ಸ್ನಾನಕ್ಕೆ ಪಾವಿತ್ರತೆ ಇದೆ. ಆದರೆ ತುಂಗ ಮತ್ತು ಭದ್ರನದಿಯ ಒಳಹರಿವು 1 ಲಕ್ಚ ಕ್ಯೂಸೆಕ್ ಗೂ ಹೆಚ್ಚಾಗುವುದರಿಂದ ಸ್ನಾನಘಟ್ಟದಲ್ಲಿ ಸ್ನಾನ ಮಾಡುವುದು ಮತ್ತು ನದಿಗೆ ಇಳಿಯುವುದನ್ನ ನಿಷೇಧಿಸಲಾಗಿದೆ.
ಹಳೇಮಂಡ್ಲಿಯಲ್ಲಿ ರಸ್ತೆಯ ಮೇಲೆ ಹರಿದ ನೀರು
ಹಳೇ ಮಂಡ್ಲಿಯ ಬಳಿ ರಸ್ತೆಯ ಮೇಲೆ ನೀರು |
ನಗರ ಭಾಗವಾಗಿರುವ ಹಳೇ ಮಂಡ್ಲಿಯಲ್ಲೂ ತುಂಗ ನದಿಯ ನೀರು ತೀರ್ಥಹಳ್ಳಿಯ ರಸ್ತೆಯ ಮೇಲೆ ಹರಿಯುತ್ತಿದೆ. ಸಧ್ಯಕ್ಕೆ ಯಾವ ಅಪಾಯವೂ ಇಲ್ಲವಾಗಿದೆ.ಮತ್ತೂರಿನಲ್ಲಿ ತುಂಗ ನದಿ ತೋಟಕ್ಕೆ ನುಗ್ಗಿದೆ ಅಡಿಕೆ ತೋಟ ಜಲಾವೃತವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ-https://www.suddilive.in/2024/07/blog-post_753.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ