ಸುದ್ದಿಲೈವ್/ಶಿವಮೊಗ್ಗ
78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಡಿಎಆರ್ ಮೈದಾನದಲ್ಲಿ ಶಿವಮೊಗ್ಗದಲ್ಲಿ ತ್ರಿವರ್ಣ ಧ್ವಜವನ್ನ ಹಾರಿಸುವ ಮೂಲಕ ಆಚರಿಸಲಾಯಿತು.
ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸರಿಯಾದ ವೇಳೆಗೆ 9 ಗಂಟೆಗೆ ಮೈದಾನದಲ್ಲಿ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು.
ಕೆಎಸ್ಆರ್ ಪಿ, ಡಿಆರ್, ಸಿವಿಲ್, ಹೋಮ್ ಗಾರ್ಡ್, ಅಗ್ನಿಶಾಮಕದಳ ಅರಣ್ಯ ಇಲಾಖೆ ಮತ್ತು ಎನ್ ಸಿಸಿ ಹಾಗೂ ಶಾಲಾ ಮಕ್ಕಳು ರಾಷ್ಟ್ರಗೀತೆಯನ್ನ ವಾದ್ಯಗಳ ಮೂಲಕ ನುಡಿಸಲಾಯಿತು. ನಂತರ ಶಾಲಾ ಮಕ್ಕಳಿಂದ ನಾಡಗೀತೆ ಹಾಡಲಾಯಿತು.
ಗೌರವವಂದನೆ ಸ್ವೀಕರಿಸಿದ ಸಚಿವ ಡಿಎಆರ್ ನ ಪ್ರಶಾಂತ್ ಅವರ ಜೊತೆ ಮಧು ಬಂಗಾರಪ್ಪ ತೆರೆದ ಜೀಪಿನಲ್ಲಿ 26 ತುಕಡಿಗಳನ್ನ ಪರಿಶೀಲನೆ ನಡೆಸಿ ವಂದನೆಗೆ ಗೌರವವಂದನೆ ಸ್ವೀಕರಿಸಿದರು ನಂತರ 26 ತುಕಡಿಗಳ ಪಥ ಸಂಚಲನ ನಡೆಸಿದರು.
ನಂತರ ಮಾತನಾಡಿದ ಸಚಿವ ಮಧು ಬಂಗಾರಪ್ಪ 12 ಸಾವಿರ ಶಿಕ್ಷಕರನ್ನ ನೇಮಿಸಲಾಗಿದೆ ಖಾಲಿ ಇರುವ 10 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಮಕ್ಕಳಿಗೆ ಚಿಕ್ಕಿ, ಮೊಟ್ಟೆ ಜೊತೆ ಊಟ ನೀಡಕಾಗುತ್ತಿದೆ. 1500 ಕೋಟಿ ಅನುದಾನದಲ್ಲಿ ಅಜಿಜ್ ಪ್ರೇಮ್ ಜಿ ಜೊತೆ ಶಿಕ್ಷಣ ನೀಡಲು ಯೋಜಿಸಲಾಗಿದೆ.
98 ಎಕರೆಯಲ್ಲಿ ಸೋಗಾನೆಯಲ್ಲಿ ಫುಡ್ ಪಾರ್ಕ್, ಚಂದ್ರಗುತ್ತಿ ಮತ್ತು ಆನವಟ್ಟಿಯಲ್ಲಿ ಶುದ್ಧ ಕುಡಿಯುವ ನೀರು ನೀಡಲು ಯೋಜಿಸಲಾಗಿದೆ. ಕಿದ್ವಾಯಿ ಆಸ್ಪತ್ರೆ ಪ್ರಗತಿಯಲ್ಲಿದೆ. ಮೆಗ್ಗಾನ್ ನಲ್ಲಿ ಮೆದುಳು ರೋಗಕ್ಕೆ ಚಿಕಿತ್ಸೆ ಕುರಿತು ಜನವರಿಯಿಂದ ಆರಂಭಿಸಲಾಗುವುದು ಎಂದು ತಿಳಿಸಿದರು.
ನಂತರ ಉತ್ತಮ ಸೇವೆ ಸಲ್ಲಿಸಿದ ಐವರು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪಥ ಸಂಚಲನದಲ್ಲಿ ಭಾಗವಹಿಸಿದ ತಂಡದ ನಾಯಕರಿಗೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಂಗಾಂಗ ದಾನ ಮಾಡಿದ ಇಬ್ಬರಿಗೆ ಪ್ರಶಂಸನೀಯ ಪತ್ರ ನೀಡಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಚೆನ್ನಬಸಪ್ಪ, ಎಎಂಎಲ್ ಸಿ ಡಾ.ಧನಂಜಯ ಸರ್ಜಿ, ಡಿಎಸ್ ಅರುಷ್ ಬಲ್ಕಿಸ್ ಭಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಗ್ಯಾರೆಂಟಿ ಸಮಿತಿಯ ಜಿಲ್ಲಾಅಧ್ಯಕ್ಚ ಚಂದ್ರಭೂಪಾಲ್, ಮತ್ತು ಕಲಗೋಡು ರತ್ನಾಕರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ