ಗುರುವಾರ, ಆಗಸ್ಟ್ 15, 2024

ದ್ವಿತೀಯ ಪಿಯುಸಿಯ ವಿಷಯಗಳನ್ನ ಬೈಲ್ಯಾಂಗ್ವೇಜ್ ನಲ್ಲಿ ಆರಂಭ

 


ಸುದ್ದಿಲೈವ್/ಶಿವಮೊಗ್ಗ


ಸಚಿವನಾಗಿ ಮೂರು ಬಾರಿ ತ್ತಿವರ್ಣ ಧ್ವಜ ಹಾರಿಸಿರುವೆ. ಎರಡು ಬಾರಿ ಸ್ವಾತಂತ್ರ್ಯೋತ್ಸವದ ದಿನಗಳಂದು ಮತ್ತು ಒಂದು ಗಣರಾಜ್ಯೋತ್ಸವ ದಿನಾಚರಣೆ ದಿನದಂದು ಬಾವುಟ ಹಾರಿಸಿರುವುದು ಸಂತೋಷ ತಂದಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.‌


ಸುದ್ದಿಗಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ಈ ಬಾರಿ ಜಲಾಶಯಗಳು ತುಂಬಿವೆ. ಕೃಷಿ ಚಟುವಟಿಕೆಗಳು ಚಾಲನೆ ಪಡೆದುಕೊಂಡಿದೆ. ನಾಳೆ ಕುಬಟೂರು ಕೆರೆಗೆ ಬಾಗಿನ  ಅರ್ಪಿಸುತ್ತಿರುವುದಾಗಿ ತಿಳಿಸಿದರು.  ಗ್ಯಾರೆಂಟಿ ಪರಿಷ್ಕರಣೆ ಅಥವಾ ಯೋಜನೆ ಬಂದ್ ಮಾಡುವ ಯಾವುದೇ ಯೋಚನೆ ಸರ್ಕಾರದಲ್ಲಿ ಇಲ್ಲ ಎಂದು ಹೇಳಿದರು. 


ಯಾರಿಗಾದರೂ ಡಬ್ಬಲ್ ಬರುತ್ತಿದ್ದರೆ, ಮಿಸ್ ಯೂಸ್ ಆಗಿತ್ತಿದ್ದರೆ ಅದರ ಬಗ್ಗೆ ಪರಿಷ್ಕರಿಸಲಾಗುತ್ತದೆ. ಇದನ್ನ ಹೊರತು ಪಡಿಸಿ ಯಾವುದೇ ಬದಲಾವಣೆ ಇಲ್ಲ. ಗ್ಯಾರೆಂಟಿ ಐದು ವರ್ಷ ನಡೆಯಲಿದೆ ಎಂದ ಅವರು. ಜಲಾಶಯದ ನೀರಿನ ಸಂರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.‌


ಶಿವಮೊಗ್ಗದಲ್ಲಿ ಭದ್ರ ಮತ್ತು ತುಂಗ ಜಲಾಶಯದಲ್ಲಿ ಸಮಸ್ಯೆ ಕಂಡು ಬಂದರೂ ತಕ್ಷಣವೇ ತೀರ್ಮಾನ ಕೈಗೊಳ್ಳಲಾಯಿತು. ಸರಿಪಡಿಸಲಾಯಿತು. ಅರಣ್ಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ದಿಟ್ಟ ಹೆಜ್ಜೆ ಮಾಡಲಾಗಿದೆ. ನಮ್ಮ ತೀರ್ಮಾನ ಮುಗಿದಿದೆ. ಉಳಿದಿದ್ದು ಕೇಂದ್ರ ಮತ್ತು ನ್ಯಾಯಾಲಯಕ್ಕೆ ಬಿಟ್ಟ ವಿಚಾರವಾಗಿದೆ. ಕೇಂದ್ರ ನಿರ್ಧರಿಸಿದರೆ ಸುಮಾರು 30-50 ಸಾವಿರ ಕುಟುಂಬ ಬದುಕುಳಿಯಲಿದೆ ಎಂದರು. 


ಕೆಪಿಎಸ್ ಸಿ ಮತ್ತು ಎಸ್ಆರ್ ಫಂಡ್ ಅಡಿ ನಮ್ಮ ಶಾಲೆ ನಮ್ಮ ಹಕ್ಕು ಅಭಿಯಾನ ತರುತ್ತಿದ್ದೇವೆ.‌ 1500 ಕೋಟಿ ಅನುದಾನದಲ್ಲಿ ಸೆ.5 ರಿಂದ 15 ರವರೆಗೆ ರಾಜ್ಯದ್ಯಾಂತ ಶಾಲಾ ಮಕ್ಕಳಿಗೆ ವಾರವಿಡಿ  ಮೊಟ್ಟೆ ಹಂಚಲಾಗುತ್ತಿದೆ. ಕುಬಟೂರಿನ ಶಾಲೆಗೆ 6.5 ಕೋಟಿ ಹಣವನ್ನ ಸರ್ಕಾರಿ ಶಾಲೆಗೆ ನೀಡಿದ್ದಾರೆ. ನಮ್ಮ ಶಾಲೆ ನಮ್ಮ ಜವಬ್ದಾರಿ ಅಭಿಯಾನದ ಅಡಿ ನೀಡುತ್ತಿದ್ದಾರೆ.


ಅನುದಾನಿತ ಶಾಲೆಗಳಿಗೆ ಕಳೆದ 9 ವರ್ಷದಿಂದ ನೇಮಕಾತಿ ಮಾಡಲಾಗಿದೆ. 5ವರ್ಷಕ್ಕೆ 5000 ಶಿಕ್ಷಕರನ್ನ ನೇಮಕಾತಿ ಮಾಡಲಾಗುತ್ತಿದೆ. ಪ್ರತಿ ತಿಂಗ ಮೂರನೇ ಶನಿವಾರ ಬ್ಯಾಗ್ ಪ್ರೀ ಡೇ, ಎಲ್ಲಾ ವಿಷಯಗಳಿಗೆ  ನೋಟ್ ಬುಕ್ ಬದಲು ನೋಟ್  ಶೀಟ್ ಹಂಚುವ ಯೋಜನೆಯನ್ನ ಮುಂದಿನ ದಿನಗಳಲ್ಲಿ ತರಲಾಗುವುದು ಎಂದರು.


ಮಕ್ಕಳನ್ನ ಪೋಷಕರು ಸರಿಯಾಗಿ ಕಳುಹಿಸಲಾಗುವುದಿಲ್ಲ. ಮೂರುದಿನ ಮಕ್ಕಳು ಶಾಲೆಗೆ ಬಂದರೆ ಮೂರುದಿನ ಬರ್ತಾ ಇಲ್ಲ. ಎಷ್ಟೇ ಕಷ್ಟವಾದರೂ ಶಾಲೆಗೆ ಬನ್ನಿ ಈ ತಿಂಗಳು ಅಥವಾ ಮುಂದಿನ‌ತಿಂಗಳು 41 ಕೆಪಿಎಸ್ ಶಾಲೆ ಆರಂಭಿಸಲಾಗುವುದು ಎಂದರು. 


ಎಲ್ ಕೆಜಿ ಯುಕೆಜಿಯನ್ನ ಅಂಗನವಾಡಿಗೆ ತೊಂದರೆ ಆಗದಂತೆ ಶಿಕ್ಷಣ ಇಲಾಖೆಯಲ್ಲೇ ಆರಂಭಿಸಲಾಗುತ್ತಿದೆ. 2000 ದ್ವಿತೀಯ ಪಿಯುಸಿಯಲ್ಲಿ ಬೈಲ್ಯಾಂಗ್ವೇಜ್ ನಲ್ಲಿ  ಆರಂಭಿಸಲಾಗುವುದು ಎಂದರು.‌


ಸಂಸದರು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ


ಸಂಸದರು ವಿಐಎಸ್ಎಲ್ ಪುನರಾಂಭಿಸುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಕಾರಣ ಅಂತಹ ಪ್ರಶ್ನೆಯನ್ನ ಅವರ ಮುಖದ ಮೇಲೆ ಬಿಸಾಕಲಾಗಿದೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ಇದರ ಬಗ್ಗೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು‌. ಏರ್ ಪೋರ್ಟ್ ನೈಟ್ ಲ್ಯಾಂಡಿಗ್ ಬಗ್ಗೆ ಸಂಸದರು ಬೃಹತ್ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರ್ ಸ್ವಾಮಿಗೆ ಪತ್ರ ನೀಡುತ್ತಾರೆ. ಅದನ್ನ ಅವರು ಮಾಡುತ್ತಾರಾ? ಅದು ಟೆಂಡರ್ ಪ್ರಕ್ರಿಯೆ ಎಂದು ಗರಂ ಮಾಡಿದರು. 


ಬದಲಾವಣೆ ಮಾಡುವೆ


ಸ್ಟೇಡಿಯಂ ವಿಸಿಟ್ ಮಾಡಿರುವೆ. ಕೆಲ ಸಮಸದಯೆಗಳಿಗೆ ಬದಲಾವಣೆ ತರುವೆ. ಅದೇ ರೀತಿ ಬೇರೆ ರೀತಿ ಸರ್ಪರೈಸ್ಡ್ ವಿಸಿಟ್ ಮಾಡುವೆ ಬದಲಾವಣೆ ತರುವೆ. ಸ್ಥಳೀಯ ಸಂಸ್ಥೆಗಳಾದ ಪಾಲಿಕೆ ಜಿಪಂ ತಾಪಂ ಚುನಾವಣೆಯನ್ನ ನಮ್ಮ ಸರ್ಕಾರ ಮಾಡಲಿದೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ