ಶನಿವಾರ, ಆಗಸ್ಟ್ 3, 2024

ತಗ್ಗಿದ ಒಳಹರಿವು-ಹೆಚ್ಚಿದ ಹೊರಹರಿವು



ಸುದ್ದಿಲೈವ್/ಶಿವಮೊಗ್ಗ


ಮಳೆಯ ಅರ್ಭಟ ಕಡಿಮೆಯಾದ ಪರಿಣಾಮ ಜಿಲ್ಲಿಯಲ್ಲಿ ಪ್ರಮುಖ ನದಿಗಳ ಒಳಹರಿವು ತಗ್ಗಿದೆ. ಆದರೆ ಜಲಾಶಯಗಳಿಂದ ಹೊರ ಬಿಡಲಾಗುತ್ತಿರುವ ಹೊರಹರಿವು ಮಾತ್ರ ತಗ್ಗಿಲ್ಲ. 


ತುಂಗ ನದಿಗೆ ನಿನ್ನೆ ಸಂಜೆಗೆ 43 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಬೆಳಿಗ್ಗೆ  47568 ಕ್ಯೂಸೆಕ್ ನೀರು ಹರಿದು ಬರುತ್ತಿವೆ. ನದಿಗೆ 21 ಗೇಟ್ ಗಳ ಮೂಲಕ ಹಾಗೂ ಚಾನೆಲ್ ಗಳ ಮೂಲ ಅಷ್ಟೇ ಪ್ರಮಾಣದ ನೀರು ಹರಿಸಲಾಗುತ್ತಿದೆ. 


ಭದ್ರೆಗೂ ಒಳಹರಿವು ತಗ್ಗಿದೆ. ಆದರೆ ಜಲಾಶಯದಿಂದ ಹೊರಹರಿವನ್ನ ಹೆಚ್ಚಿಗೆ ಮಾಡಲಾಗಿದೆ. ಜಲಾಶಯಕ್ಕೆ 30350 ಕ್ಯೂಸೆಕ್ ಒಳಹರಿವಿದ್ದು, ಭದ್ರ ಎಡ ಮತ್ತು ಬಲದಂಡೆ, ಸ್ಪಿಲ್ ವೇ ಮೂಲಕ 56032 ಕ್ಯೂಸೆಕ್ ಗಳನ್ನ ಹರಿಸಲಾಗುತ್ತಿದೆ. ನಾಲ್ಕು ಗೇಟ್ ಮೂಲಕ ನದಿಗೆ  ನೀರು ಹರಿಸಾಗುತ್ತಿದೆ. ನಿನ್ನೆ 182.3 ಅಡಿ ನೀರು ಸಂಗ್ರಹವಾಗಿದ್ದರೆ ಇಂದು ಜಲಾಶಯದಲ್ಲಿ 180.9 ಅಡಿ ನೀರು ಸಂಗ್ರಹವಾಗಿದೆ. 


ಲಿಂಗನಮಕ್ಕಿಯಲ್ಲಿ ನಿನ್ನೆ ರಾತ್ರಿ ಇದ್ದ ಒಳಹರಿವು ಇಂದು ಬೆಳಿಗ್ಗೆ ಅಷ್ಟು ಹೊತ್ತಿಗೆ ಹೆಚ್ಚಳವಾಗಿದೆ.  ಲಿಂಗನಮಕ್ಕಿಗೆ ಇಂದು 61835 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಸಾಮರ್ಥ್ಯ ಜಲಾಶಯದಲ್ಲಿ ಇಂದು 1815.35 ಅಡಿ ನೀರು ಸಂಗ್ರಹವಾಗಿದೆ.  .35 ಅಡಿ ಮಾತ್ರ ನೀರು ಸಂಗ್ರಹವಾಗಿದೆ. 


151.64 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇಂದು 139.59 ಟಿಎಂಸಿ ನೀರು ಸಂಗ್ರಹವಾಗಿದೆ. ಕ್ರಸ್ಟ್ ಗೇಟು, ಸ್ಪಿಲ್ ವೇ, ಸ್ಲೂಯಿಸ್ ಮತ್ತು ಪೆನ್ ಸ್ಟಾಕ್ ಮೂಲಕ ಒಟ್ಟು 48184 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಈ ದಿನಕ್ಕೆ ಜಲಾಶಯದಲ್ಲಿ 1788.55 ಅಡಿ ನೀರು ಸಂಗ್ರಹವಾಗಿತ್ತು.


ಇದನ್ನೂ ಓದಿ-https://www.suddilive.in/2024/08/18.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ