Suddi Live/ಶಿವಮೊಗ್ಗ
ಅನೇಕ ದಿನಗಳಿಂದ ಮಾಂಗಲ್ಯ ಸರ ಕಳುವು ಪ್ರಕರಣಗಳಿಗೆ ಬ್ರೇಕ್ ಬಿದ್ದಿತ್ತು. ಮಳೆಗಾಲವಿದ್ದುದ್ದರಿಂದ ನಗರದಲ್ಲಿ ಮಾಂಗಲ್ಯ ಪ್ರಕರಣವು ಸಂಪೂರ್ಣ ನಿಲ್ ಆಗಿತ್ತು. ಆದರೆ ಸಣ್ಣಕ್ಕೊಂದು ಪ್ರಕರಣ ನಗರದ ಹೊರಭಾಗದಲ್ಲಿ ನಡೆದಿದೆ.
ಆ.13 ರಂದು ಮಂಡ್ಲಿ ಕಲ್ಲೂರಿನ ಫ್ಯಾಕ್ಟರಿಗೆ ಹೋಗುತ್ತಿದ್ದ 53 ವರ್ಷದ ಮಹಿಳೆ ಸಂಜೆ 7-30 ಕ್ಕೆ ಮನೆಗೆ ವಾಪಾಸ್ ಆಗುವಾಗ ಭುವನ್ ಫ್ಯಾಕ್ಟರಿಯ ಬಳಿ ಬರುತ್ತಿದ್ದಂತೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ತಳ್ಳಿದ್ದಾನೆ. ನೆಲಕ್ಕೆ ಬಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 20 ಗ್ರಾಂ ಚಿನ್ನಾಭರಣವನ್ನ ಕಿತ್ತುಕೊಂಡಿದ್ದಾನೆ.
ಭಯದಿಂದ ಕೂಗಿಕೊಳ್ಳದ ಕಾರಣ ಮಹಿಳೆ ಜೀವ ಉಳಿಸಿಕೊಂಡಿರುವುದಾಗಿ ತಿಳಿಸಿದ್ದು, ದೂರದಲ್ಲಿ ಬೈಕ್ ನಲ್ಲಿ ಕುಳಿತಿದ್ದ ವ್ಯಕ್ತಿ ಹತ್ತಿರ ಬರುತ್ತಿದ್ದಂತೆ ಮಹಿಳೆಯ ಮಾಂಗಲ್ಯವನ್ನ ಕಿತ್ತುಕೊಂಡ ವ್ಯಕ್ತಿ ಬೈಕ್ ಏರಿ ಪಾಸ್ ಆಗಿದ್ದಾನೆ. ಕತ್ತಲು ಆವರಿಸಿಕೊಂಡ ಪರಿಣಾಮ ಬೈಕ್ ನಂಬರ್ ಕಾಣಿಸಲಿಲ್ಲ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ನಂತರ ಫ್ಯಾಕ್ಟರಿಯ ಜನ ಬಂದು ಮಹಿಳೆಗೆ ಉಪಚರಿಸಿದ್ದಾರೆ. ಭಯಕ್ಕೆ 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಲು ಬಿಟ್ಟಿದ್ದು ಅಪರಿಚಿತ ಇಬ್ಬರನ್ನ ಹುಡುಕಿಕಿಡುವಂತೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ