Girl in a jacket

ಸರ್ಕಾರಿ ವಸತಿ ಶಾಲೆ ಶಿಕ್ಷಕನ ವಿರುದ್ಧ ಪೋಕ್ಸೋ ದೂರು-ದೂರಿನ ಬೆನ್ನಲ್ಲೆ ಶಿಕ್ಷಕ ಪೊಲೀಸರ ವಶಕ್ಕೆ



ಶಿವಮೊಗ್ಗ/ತೀರ್ಥಹಳ್ಳಿ


ವಸತಿ ಶಾಲೆಯ ಶಿಕ್ಷಕನಿಂದ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಹಿನ್ನಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ದೂರೊಂದು ದಾಖಲಾಗಿದೆ. ದೂರಿನ ಅನ್ವಯ ಸಂಗೀತ ಶಿಕ್ಷಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.


10 ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿನಿಯರ ದೇಹ ಮುಟ್ಟಿ ಅಸಭ್ಯ ವರ್ತನೆ ನಡೆಸಿರುವ ಅರೋಪ ಕೇಳಿ ಬಂದಿದೆ. ಸಂಗೀತ ಶಿಕ್ಷಕ ಇಮ್ತಿಯಾಜ್ (45) ನ ವಿರುದ್ಧ ಪೋಕ್ಸೋ ಆರೋಪ ಮಾಡಲಾಗಿದೆ. 


ಹಲವು ದಿನಗಳಿಂದ ಅಸಭ್ಯವಾಗಿ ವರ್ತಿಸುತ್ತಿರುವ ಶಿಕ್ಷಕನ ದುರ್ವರ್ತನೆ ಬಗ್ಗೆ  ವಿದ್ಯಾರ್ಥಿನಿಯರೇ ಪ್ರಾಂಶುಪಾಲರಿಗೆ ದೂರು ನೀಡಿರುವುದಾಗಿ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ದೂರಿನ ಮೇರೆಗೆ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಾಂಶುಪಾಲರೇ ದೂರು ದಾಖಲಿಸಿದ್ದರು. 


ಶಿಕ್ಷಕನ ವಿರುದ್ದ‌ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಶಿಕ್ಷಕನ ವಿರುದ್ದ ಪ್ರಕರಣ ದಾಖಲಾಗಿದೆ. ಪೊಕ್ಸೋ ಕಾಯಿದೆ ಅಡಿ ತೀರ್ಥಹಳ್ಳಿ ಪೊಲೀಸರು ಶಿಕ್ಷಕರನ್ನ ವಶಕ್ಕೆ ಪಡೆದಿದ್ದು ಬಂಧನದ ಪ್ರಕ್ರಿಯೆ ನಡೆದಿರುವುದಾಗಿ ತಿಳಿದು ಬಂದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close