ಸುದ್ದಿಲೈವ್/ಶಿವಮೊಗ್ಗ
ಜೈಲಿನಲ್ಲಿ ನಿಷೇಧಿತ ವಸ್ತುಗಳಾದ ಗಾಂಜಾ ಪತ್ತೆ ಮುಂದು ವರೆದಿದೆ. ಜುಲೈ ತಿಂಗಳ ಕೊನೆಯ ವಾರದಲ್ಲಿ ಕಾರಾಗೃಹದಲ್ಲಿ ಇದೇ ತರಹವೊಂದು ವಸ್ತು ಪತ್ತೆಯಾಗಿತ್ತು. ಈಗ ಮತ್ತೊಂದು ನಿಷೇಧಿತ ವಸ್ತು ಪತ್ತೆಯಾಗಿದೆ.
ಕೊಠಡಿ ಸಂಖ್ಯೆ 23 ರ ಬಳಿ ಎರಡು ನಿಷೇಧಿತವಸ್ತುಗಳುಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಹಸಿರು ಹುಲ್ಲು ಸುತ್ತಿದ ವಸ್ತುವೊಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ನಲ್ಲಿ ಪತ್ತೆಯಾಗಿದೆ. ಕೆಎಸ್ ಐ ಎಸ್ಎಫ್ ಸಿಬ್ಬಂದಿಯ ಸರ್ಪಗಾವಲು ಇದ್ದರೂ ಕಾರಾಗೃಹದಲ್ಲಿ ನುಸಳಿ ಬಂದು ಗಾಂಜಾ ಇಟ್ಟಿರುವ ಬಗ್ಗೆ ಜೈಲಿನ ಸೂಪರಿಂಟೆಂಡೆಂಟ್ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತು.
ಕಳೆದ ಜುಲೈನಲ್ಲಿ ಹೊರವಲಯದಲ್ಲಿರುವ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನ ಕಪ್ಪು, ಹಸಿರು, ನೀಲಿ ಬಣ್ಣದ ಗಮ್ ಪಟ್ಟಿಯನ್ನ ಸುತ್ತಿರುವ ಅನುಮಾನಸ್ಪದವಾಗಿ ವಸ್ತುಗಳನ್ನ ಇಡಲಾಗಿತ್ತು. ಜೈಲಿನ ಕುಮಧ್ವತಿ ವಿಭಾಗದ ಕೊಠಡಿ ಸಂಖ್ಯೆ 50 ರ ಹಿಂಭಾಗದಲ್ಲಿದಲ್ಲಿ ವಸ್ತುವನ್ನ ಇಡಲಾಗಿತ್ತು. ಇದು ಸಿಸಿ ಟಿವಿಯನ್ನ ಪರಿಶೀಲಿಸುವಾಗ ಅಲ್ಲಿನ ಸಿಬ್ಬಂದಿಗೆ ಪತ್ತೆಯಾಗಿತ್ತು.
ಕಡಿಮೆ ಅಂತರದಲ್ಲಿ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ