ಶನಿವಾರ, ಆಗಸ್ಟ್ 10, 2024

ಗೃಹಣಿಯ ಕುತ್ತಿಗೆಗೆ ಚಾಕು ಇಟ್ಟವನು ಕೂಗಿದಾಕ್ಷಣ ಪರಾರಿ

ಶಿವಮೊಗ್ಗ ಗ್ರಾಮಾಂತ ಠಾಣೆ


ಸುದ್ದಿಲೈವ್/ಶಿವಮೊಗ್ಗ


ಮನೆಯಲ್ಲಿದ್ದ ಗೃಹಿಣಿಯ ಮೇಲೆ ಓರ್ವ ವ್ಯಕ್ತಿ ಮತ್ತು ಆತನ ತಾಯಿ ಏಕಾಏಕಿ ಮೆಟ್ಟಿಲು ಹತ್ತಿಕೊಂಡು ಬಂದು ಚಾಕುವನ್ನ‌ಮಹಿಳೆಯ ಕುತ್ತಿಗೆಗೆ ಇಟ್ಟು ಗಾಯಗೊಳಿಸಿರುವ  ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.


ಚಿಕ್ಕಮಗಳೂರಿನ ಮಹಿಳೆಯೊಬ್ಬರು 10 ವರ್ಷಗಳ ಹಿಂದೆ ಚಿತ್ರದುರ್ಗದ ಸಿಂಗಾಪುರ ಗ್ರಾಮದ ವ್ಯಕ್ತಿಯೋರ್ವನನ್ನ ಮದುಗೆಯಾಗಿದ್ದರು. ಅವರಿಗೆ  ಮಗಳೊಬ್ಬಳು ಇದ್ದಾಳೆ. ಪತಿ ಸಹ ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.


ನಾಲ್ಕು ತಿಂಗಳ ಹಿಂದೆ ಬಸವೇಶ್ವರ ನಗರದ  ಎರಡನೇ ಕ್ರಾಸ್ ನ ಮನೆಯ ಮೇಲೆ ಮಹಿಳೆ ಮನೆಯಲ್ಲಿದ್ದಾಗ, ಏಕಾಏಕಿ ಓರ್ವ ವ್ಯಕ್ತಿ ಮತ್ತು‌ ಆತನ ತಾಯಿ ಗೇಟು ತೆಗೆದು ಮೆಟ್ಟಿಲು ಹತ್ತಿ ಬರುತ್ತಿದ್ದಾರೆ. ಗೇಟಿನ ಶಬ್ದ ಕೇಳಿ ಮೆಟ್ಟಿಲಿನ‌ಬಳಿ ಬಂದ ಮಹಿಳೆಯ ಮೇಲೆ ವ್ಯಕ್ತಿ ಎರಗಿ ಕುತ್ತಿಗೆಗೆ ಚಾಕು ಇಟ್ಟಿದ್ದಾನೆ.


ಈ ವೇಳೆ ಕಿರುಚಿದಾಗ ವ್ಯಕ್ತಿ ಮತ್ತು ಮಹಿಳೆ ಪರಾರಿಯಾಗಿದ್ದಾರೆ. ಇವರನ್ನ ಮಂಜುನಾಯ್ಕ್ ಮತ್ತು ಮಂಜುಳ ಎಂದು ಗುರುತಿಸಲಾಗಿದೆ. ಪರಾರಿಯಾಗುವಾಗ ಗೃಹಿಣಿಯ ಕುತ್ತಿಗೆಗೆ ಗಾಯವಾಗಿದ್ದು ಮೆಗ್ಗಾನ್ ಗೆ ದಾಖಲಾಗಿದ್ದಾರೆ. ಆತ ಮಹಿಳೆಯ ಮೇಲೆ ದಾಳಿ ಮಾಡಲು ಹಣದ ವ್ಯವಹಾರದಲ್ಲಿ ಮನಸ್ಥಾಪವಾಗಿದ್ದರಿಂದ ಈಘಟನೆ ನಡೆದಿರ ಬಹುದು ಎಂದು ಮಹಿಳೆ ಶಂಕಿಸಿದ್ದಾರೆ. ಘಟನೆ ಶಿವಮೊಗ್ಗ‌ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ