ಶುಕ್ರವಾರ, ಆಗಸ್ಟ್ 2, 2024

ಪ್ರಾಮಾಣಿಕತೆ ಮೆರೆದ ಕಟಿಂಗ್ ಶಾಪ್ ಸೋಮಣ್ಣ



ಸುದ್ದಿಲೈವ್/ಶಿವಮೊಗ್ಗ 


ಭ್ರಷ್ಠಾಚಾರ, ವಂಚನೆ, ದಗಾ ಮೋಸಗಳೆ ಹೆಚ್ಚು ನಡೆಯುತ್ತಿರುವ ಈ ಸಮಾಜದಲ್ಲಿ ಚೋರಡಿಯಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಸೋಮಶೇಖರ್ ಎಂಬುವರು ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ ನ್ನ ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ  ಪ್ರಾಮಾಣಿಕತೆ ಮೆರೆದಿದ್ದಾರೆ.


ಚೋರಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಲ್.ರೇಣುಕಾ ಅವರು ಗುರುವಾರ ಎಂದಿನಂತೆ ಶಾಲೆಗೆ ತೆರಳಿದ್ದರು. ಆಗ ಬಿಸಿಯೂಟಕ್ಕಾಗಿ ತರಕಾರಿ ಇರುವ ಚೀಲದೊಂದಿಗೆ ತಮ್ಮ ವೈಯುಕ್ತಿಕ ಬ್ಯಾಗ್ ಕೂಡ ದ್ವಿಚಕ್ರ ವಾಹನದಲ್ಲಿ ಇರಿಸಿಕೊಂಡು ಹೋಗಿದ್ದರು. ಆದರೆ ಮಾರ್ಗ ಮಧ್ಯೆ ಈ ಬ್ಯಾಗ್ ಬಿದ್ದು ಹೋಗಿತ್ತು.


ಶಾಲೆಗೆ ಹೋಗಿ ನೋಡಿದಾಗ ಬ್ಯಾಗ್ ಕಳೆದು ಹೋಗಿರುವುದು ಕಂಡು ಬಂದಿತ್ತು. ಈ ಬ್ಯಾಗ್‌ನಲ್ಲಿ ತಮ್ಮ ವೇತನದಿಂದ ಬಿಡಿಸಿಕೊಂಡಿದ್ದ 1 ಲಕ್ಷ ರೂ. ನಗದು, ಬ್ಯಾಂಕ್ ಪಾಸ್ ಪುಸ್ತಕ, ಶಾಲಾ ದಾಖಲಾತಿಗಳು, ವೈಯುಕ್ತಿಕ ದಾಖಲಾತಿಗಳು ಕೂಡ ಇದ್ದವು.


ರಸ್ತೆಯಲ್ಲಿ ಬರುತ್ತಿದ್ದ ಸೋಮಶೇಖರ್ ಅವರಿಗೆ ಈ ಬ್ಯಾಗ್ ಸಿಕ್ಕಿತ್ತು. ಅದನ್ನು ಪರಿಶೀಲಿಸಿದಾಗ ಮುಖ್ಯ ಶಿಕ್ಷಕರದ್ದು ಎಂದು ಕಂಡುಬಂದಿತ್ತು. ಕೂಡಲೇ ಶಾಲೆಗೆ ತೆರಳಿ ಮುಖ್ಯ ಶಿಕ್ಷಕಿ ರೇಣುಕಾ ಅವರಿಗೆ ಬ್ಯಾಗ್ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದರು. ಬ್ಯಾಗ್ ಮರಳಿಸಿದ್ದಕ್ಕೆ ಪ್ರತಿಯಾಗಿ ಬಹುಮಾನ ನೀಡಲು ಶಿಕ್ಷಕಿ ಮುಂದಾದರೂ ಸೋಮಶೇಖರ್ ನಿರಾಕರಿಸಿದರು. ಸೋಮಶೇಖರ್ ಅವರ ಕಾರ್ಯ ಶ್ಲಾಘನೆಗೆ ಪಾತ್ರವಾಯಿತು.

ಇದನ್ನೂ ಓದಿ-https://www.suddilive.in/2024/08/blog-post_71.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ