ಸುದ್ದಿಲೈವ್/ಶಿವಮೊಗ್ಗ
ಅಪ್ರಾಪ್ತ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋಬನಗರದಲ್ಲಿ ದೂರು ದಾಖಲಾಗಿದ್ದು ಈ ಸಂಬಂಧ ಐದು ಜನರನ್ನ ಪೊಲೀಸರು ನ್ಯಾಯಾಂಗ ಬಂಧಕ್ಕೊಳಪಡಿಸಿದ್ದಾರೆ.
ಬಾಸ್ ಎಂದು ಕರೆದಿಲ್ಲ ಎಂಬ ಕಾರಣಕ್ಕೆ ಜಾತ್ರೆಗೆ ಹೋಗಿದ್ದ ಅಪ್ರಾಪ್ತ ಬಾಲಕ ಮತ್ತು ಆತನ ಸ್ನೇಹಿತರನ್ನ ಬುದ್ದಯಾನೆ ಕಾರ್ತಿಕ್ ಎಂಬುವನು ಪುರಲೆಯ ತೋಟದ ಮನೆಯಲ್ಲಿ ಹಲ್ಲೆ ನಡೆಸಿದ್ದಾನೆ. ಅಪ್ರಾಪ್ತ ಬಾಲಕನ ಜೊತೆಯಲ್ಲಿ ಬಂದಿದ್ದ ಸ್ನೇಹಿತನೇ ಜಾತ್ರೆಯಿಂದ ಪುರಲೆಗೆ ಕರೆದುಕೊಂಡು ಹೋಗಿದ್ದು,
ಅಲ್ಲಿ ಎಳನೀರು ಸೀನ, ಮತ್ತು ಅವರ ಸ್ನೇಹಿತರು ಪುರಲೆ ಸಮೀಪದ ತೆಂಗಿನ ತೋಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಬುದ್ದ ಯಾನೆ ಕಾರ್ತಿಕ್ ಎಂಟ್ರಿಕೊಟ್ಟಿದ್ದಾನೆ. ಬಾಸ್ ಅಂತ ಹೇಳಲ್ವಾ ನೀನು ಎಂದು ಹಲ್ಲೆ ನಡೆಸಿದ್ದಾನೆ.
ಮಧ್ಯಾಹ್ನ 1-30 ರಿಂದ 2 ಗಂಟೆಯ ಹೊತ್ತಿಗೆ ಈ ಘಟನೆ ನಡೆದರೆ ತೋಟದಲ್ಲಿ ಸುಮಾರು ರಾತ್ರಿ 7-30 ರವರೆಗೆ ಇಟ್ಟುಕೊಳ್ಳಲಾಗಿರುತ್ತದೆ. ಇಲ್ಲಿ ಕಬ್ಬಿಣದ ರಾಡು, ಕೋಲಿನಿಂದ ಹಲ್ಲೆನಡೆಸಲಾಗಿದೆ. ಆತನ ಕಿವಿಯಲ್ಲಿ ರಕ್ತ ಸ್ರಾವವಾಗಿದೆ. ನಂತರ ಆರ್ ಎಂಸಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ.
ಪೊಲೀಸರಿಗೆ ದೂರುಕೊಟ್ಟರೆ ಮನೆಗೆ ಬೆಂಕಿ ಇಡುವುದಾಗಿ ಬೆದರಿಸಲಾಗಿದೆ. ಈ ಮೊದಲು ಅಪ್ರಾಪ್ತ ಬಾಲಕನ ಸ್ನೇಹಿನತನಿಗೂ ಮತ್ತು ಬುದ್ದ ಯಾನೆ ಕಾರ್ತಿಕ್ ಗೂ ಕಿರಿಕ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬುದ್ದ ಯಾನೆ ಕಾರ್ತಿಕದ, ಎಳನೀರು ಸೀನಾ, ನಾಗ ಮತ್ತೊಬ್ಬರನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನ ಕ್ಕೊಳಪಡಿಸಿದ್ದಾರೆ.
ಇದನ್ನೂ ಓದಿ-
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ