ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ವೇಳೆ ನಡೆದಿದ್ದೇನು?



ಸುದ್ದಿಲೈವ್/ಶಿವಮೊಗ್ಗ


ಮುಖ್ಯಮಂತ್ರಿ ಸಿದ್ದರಾಯ್ಯನವರ ಹುಟ್ಟು ಹಬ್ಬದ ವೇಳೆ ನಾಲ್ವರು ಕಿಡಿಗೇಡಿಗಳಿಂದ ಕಲ್ಲುತೂರಿ ಫ್ಲೆಕ್ಸ್ ಹರಿದು ಹಾಕಿರುವ ಘಟನೆ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಆ.03 ರಂದು ಸಂಜೆ ಮಿಳಘಟ್ಟದ ಇಂದಿರಾ ಕ್ಯಾಂಟೀನ್ ನ ಬಳಿ ಕಾಂಗ್ರೆಸ್ ಕಾರ್ಯರ್ತರು ಸಿದ್ದರಾಮಯ್ಯನವರ 75 ನೇ ವರ್ಷದ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದರು.‌ ನಾಲ್ವರು ಬೈಕ್ ನಲ್ಲಿ ಬಂದು ಹುಟ್ಟು ಹಬ್ಬ ಆಚರಿಸುತ್ತಿರುವವರ ಮೇಲೆ ಕಲ್ಲುಬೀಸಿರುವುದಾಗಿ ಆರೋಪಿಸಲಾಗಿದೆ. 

https://www.suddilive.in/2024/04/07.html

ಅಷ್ಟೆ ಅಲ್ಲದೇ ಸಿದ್ದರಾಮಯ್ಯನವರಿಗೆ ಶುಭಕೋರಿ ಹಾಕಲಾಗಿದ್ದ ಫ್ಲೆಕ್ಸ್ ನ್ನ ಹರಿದು ಹಾಕಿರುವುದಾಗಿ ರೆಹಮತ್ ಎಂಬುವರು ನ್ಯಾಯಾಲಯದ ಅನುಮತಿ ಪತ್ರ ಪಡೆದು ದೊಡ್ಡಪೇಟೆಯಲ್ಲಿ ನಾಲ್ವರ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close