ಬುಧವಾರ, ಆಗಸ್ಟ್ 7, 2024

ಖಾಲಿಯಿರುವ ಗೃಹರಕ್ಷಕರ ಸೇವೆಗೆ ಅರ್ಜಿ ಆಹ್ವಾನ

ಸಾಂಧರ್ಭಿಕ ಚಿತ್ರ


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಜಿಲ್ಲೆಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿಯಿರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಒಟ್ಟು 189 ಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಭಾರತೀಯ ಪ್ರಜೆಯಾಗಿದ್ದು, 19 ರಿಂದ 45 ವರ್ಷ ವಯೋಮಿತಿಯ, 10ನೇ ತರಗತಿ ಪಾಸಾಗಿರುವ, ವೈದ್ಯಕೀಯವಾಗಿ ಸಶಕ್ತರಾಗಿರುವ ಹಾಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು/ಆರೋಪ ಅಥವಾ ಅಪರಾಧಿಯಾಗಿರದವರು ಅರ್ಜಿ ಸಲ್ಲಿಸಬಹುದಾಗಿದೆ.


ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್‌ಷನ್, 2ನೇ ಮಹಡಿ, ಗಾಂಧಿನಗರ ಮುಖ್ಯರಸ್ತೆ, ಶಿವಮೊಗ್ಗ, ಅಥವಾ ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಚೇರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು  *ಆ.12ರೊಳಗಾಗಿ* ಸಲ್ಲಿಸುವಂತೆ ಜಿಲ್ಲಾ ಗೌರವ ಸಮಾದೇಷ್ಠರಾದ ಡಾ. ಚೇತನ ಹೆಚ್.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295630 / 255630 ಗಳನ್ನು ಸಂಪರ್ಕಿಸುವುದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ