ಗುರುವಾರ, ಆಗಸ್ಟ್ 15, 2024

ಕಿಡಿಗೇಡಿಗಳಿಂದ ಕಲ್ಲು ತೂರಟ

 


Suddi Live/ಶಿವಮೊಗ್ಗ

ನಗರದಲ್ಲಿ ಮನೆಯೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಬಾಗಿಲು ತೆಗೆದು ನೋಡಲು ಹೋದಾಗ ವೃದ್ಧನ ಮೇಲೆ ಇಟ್ಟಿಗೆ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.


ಶಿವಮೊಗ್ಗದ ಕಾಮಾಕ್ಷಿ ಬೀದಿಯ ರಾಮಣ್ಣ ಎಂಬುವವರ ಮನೆ ಮೇಲೆ ಕಲ್ಲು ತೂರಲಾಗಿದೆ. ಆ.11ರ ರಾತ್ರಿ ರಾಮಣ್ಣ ಅವರು ಊಟ ಮುಗಿಸಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಹೊರಗೆ ಶಬ್ದವಾಗಿದೆ. ರಾಮಣ್ಣ ಮತ್ತು ಅವರ ಪತ್ನಿ ಬಾಗಿಲು ತೆಗೆದಾಗ ಕಿಡಿಗೇಡಿಗಳು ತೂರಿದ ಇಟ್ಟಿಗೆ ರಾಮಣ್ಣ ಅವರ ಭುಜದ ಮೇಲೆ ಬಿದ್ದಿದೆ. ಕೂಡಲೆ ಮೊಮ್ಮಗನಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.


ಪೊಲೀಸ್‌ ಠಾಣೆಗೆ ದೂರು ನೀಡಲು ಮೊಮ್ಮಗನೊಂದಿಗೆ ತೆರಳುತ್ತಿದ್ದಾಗ ಕಿಡಿಗೇಡಿಗಳು ಪುನಃ ಕಲ್ಲು ತೂರಿದ್ದಾರೆ. ಅದೃಷ್ಟವಶಾತ್‌ ಪಾರಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ರಾಮಣ್ಣ ಅವರಿಗೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ