Girl in a jacket

ದೇವಸ್ಥಾನಗಳನ್ನ ಸರ್ಕಾರದಿಂದ ಮುಕ್ತಗೊಳಿಸಿ-ವಿಹೆಚ್ ಪಿ ಆಗ್ರಹ



ಸುದ್ದಿಲೈವ್/ಶಿವಮೊಗ್ಗ

ಹಿಂದೂ ಧಾರ್ಮಿಕ ಕೇಂದ್ರಗಳನ್ಮ ಸರ್ಕಾರ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್  ಶಿವಮೊಗ್ಗ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

ಪವಿತ್ರವಾದ ಶ್ರದ್ಧಾಕೇಂದ್ರಗಳಾಗಿರುವ ಹಿಂದೂ ಧಾರ್ಮಿಕ ಮತ್ತು ತೀರ್ಥಕ್ಷೇತ್ರಗಳನ್ನು ಸರ್ಕಾರದ ದಬ್ಬಾಳಿಕೆ/ ನಿಯಂತ್ರಣದಿಂದ ಮುಕ್ತಗೊಳಿಸಬೇಕು.

ತಿರುಪತಿ ವೆಂಕಟೇಶ್ವರ ದೇವಸ್ಥಾನವು ಸರ್ಕಾರದ ನಿಯಂತ್ರಣದಲ್ಲಿದ್ದರೂ ಹಿಂದೂಗಳ ಭಾವನೆಗಳಿಗೆ ದಕ್ಕೆ ಉಂಟಾಗಿದೆ. ನಮ್ಮ ರಾಜ್ಯ ಮತ್ತು ಭಾರತದಾದ್ಯಂತ ಕೋಟ್ಯಂತರ ಹಿಂದೂಗಳಿಗೆ ತಿರುಮಲ ತಿರುಪತಿ ದೇವಸ್ಥಾನ, ಅಲ್ಲಿನ ಶ್ರೀವೇಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಹಂದಿಯ ಕೊಬ್ಬು ದನದ ಕೊಬ್ಬನ್ನು ಸೇರಿಸಿ ಹಿಂದಿನ ಸರ್ಕಾರ ಅಪವಿತ್ರಗೊಳಿಸಿದೆ.

ಹಾಗಾಗಿ ದೇವಸ್ಥಾನಗಳನ್ನ ಸರ್ಕಾರದ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಬೇಕು. ಅಪವಿತ್ರ ಗೊಳಿಸಿರುವ ಆಂದ್ರದ ಹಿಂದಿನ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು