Girl in a jacket

ಶಿವಮೊಗ್ಗದಲ್ಲಿ ಗಣಪತಿಗೆ ಮಸೀದಿ ಕಮಿಟಿಯಿಂದ ಹೂವಿನ ಹಾರ-ಸೌಹಾರ್ಧತೆಗೆ ಸಾಕ್ಷಿಯಾಯಿತು ಇಮಾಮ್ ಬಾಡ-ಸೀಗೆಹಟ್ಟಿ



ಸುದ್ದಿಲೈವ್/ಶಿವಮೊಗ್ಗ


ಇಮಾಮ್ ಬಾಡ ಮತ್ತು ಸೀಗೆಹಟ್ಟಿಯಲ್ಲಿ ಮುಸ್ಲೀಂರು ಗಣಪತಿಗೆ ಹಾರಹಾಕಿ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿರುವ ಘಟನೆ ನಡೆದಿದೆ. ಇದರಿಂದ  ಎರಡೂ ಕೋಮಿನಿಂದ ಸೌಹಾರ್ಧತೆ ಮೆರೆದಿರುವ ಪ್ರಸಂಗ ಸಂಭವಿಸಿದೆ.‌ 


ಪ್ರತಿ ವರ್ಷ ಗಣಪತಿ ಮೆರವಣಿಗೆಯ ಸಂದರ್ಭದಲ್ಲಿ ಗಣಪತಿ ಇಮಾಮ್  ಬಾಡ ಮಸೀದಿ ರಸ್ತೆಗೆ ಬರುತ್ತಿದ್ದಂತೆ,  ಸ್ಥಳ ಉದ್ವಿಗ್ನವಾಗುತ್ತಿತ್ತು. ಮಾತಿನ ಚಕಮಕಿ ನಡೆದಿತ್ತು. ಆದರೆ ಈ ಬಾರಿ ಮಸೀದಿ ಕಮಿಟಿಯವರೆ ಹೂವಿನ ಹಾಕುವ ಮೂಲಕ ಶಿವಮೊಗ್ಗದಲ್ಲಿ ಸೌಹಾರ್ಧತೆಗೆ ಮುನ್ನುಡಿ ಬರೆದಿದ್ದಾರೆ. 



ಮುರಾದ್ ನಗರದಲ್ಲಿರುವ ಅಹಮದ್ ಕಾಲೋನಿಯ ಸೆಕೆಂಡ್ ಕ್ರಾಸ್ ನಲ್ಲಿ ಪ್ರತಿಷ್ಠಾಪಿಸಲಾದ ಸ್ನೇಹಜ್ಯೋತಿ ಗೆಳೆಯರ ಬಳಗದ ಗಣಪತಿ ಮೂರ್ತಿಯ ವಿಸರ್ಜನ ಮೆರವಣಿಗೆ ಇಂದು ನಡೆದಿದೆ. ಕೆಜಿಎನ್ ಸರ್ಕಲ್,  ಸಂದೇಶ್ ಮೋಟಾರ್ ಮೂಲಕ ವಾಪಾಸ್ ಅದೇ ರಸ್ತೆಯಲ್ಲಿ ಇಮಾಬಾಡ ಮಸೀದಿ ರಸ್ತೆಯ ಮೂಲಕ ಸೀಗೆಹಟ್ಟಿ ವೃತ್ತ ತಲುಪಲಿದೆ. 


ಇಮಾಮ್ ಬಾಡ ಮಸೀದಿ ರಸ್ತೆಗೆ ಬಂದಾಗ ಕಳೆದ ಎರಡು ಬಾರಿಯ ವಿಸರ್ಜನಾ ಮೆರವಣಿಗೆಯಲ್ಲಿ ನಡೆದಿತ್ತು. ಮಾತಿನ ಚಕಮಕಿಯೂ ನಡೆದಿತ್ತು. ಆದರೆ ಈ ಬಾರಿ  ಮಸೀದಿ ಕಮಿಟಿಯ ನೂರುಲ್ಲಾರ ಮತ್ತು ಅವರ ಸಹಚರರು ಮಸೀದಿ ಬಳಿ ಮೆರವಣಿಗೆ ಬರುತ್ತಿದ್ದಂತೆ ಗಣಪನಿಗೆ ಹೂವಿನ ಹಾರಹಾಕಿ ಸೌಹಾರ್ಧತೆ ಮೆರೆದಿದ್ದಾರೆ. ಯಾವಾಗಲೂ ಸೂಕ್ಷ್ಮ ವಲಯ ಎನಿಸಿಕೊಳ್ಳುತ್ತಿದ್ದ ಈ ಜಾಗ ಸೌಹಾರ್ಧತೆಗೆ ಸಾಕ್ಷಿಯಾಗಿದೆ. ಸೌಹಾರ್ಧತೆಯನ್ನ ಸಾಧಿಸಲು ದೊಡ್ಡಪೇಟೆ ಪೊಲೀಸ್ ಪಿಐ ರವಿ ಸಂಗನಗೌಡ ಪಾಟೀಲರ ಧಕ್ಷ ಕಾರ್ಯಚರಣೆಯೂ ಇದರಲ್ಲಿ ಅಡಗಿದೆ.  


ಇಂತಹ ಕೆಲಸ ಈ ಬಾರಿ ರಾಗಿಗುಡ್ಡದಲ್ಲಿಯೂ ನಡೆದಿದೆ. ಮಸೀದಿ ಕಮಿಟಿಯವರು ಹೂವಿನ ಹಾರ ಹಾಕಿದ್ದಾರೆ. ಇಮಾಮ್ ಬಾಡ ಮಸೀದಿಯವರು ಗಣಪನಿಗೆ ಹೂವಿನ ಹಾರ ಹಾಕಿ  ಗಣಪತಿ ವಿರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ‌. ಇದರಿಂದ ಗಣಪತಿ ವಿಸರ್ಜನಾ ಮಂಡಳಿಯ ಯುವಕರು ಸಂತೋಷಗೊಂಡು  ಈ ಬಾರಿ ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗುವುದಾಗಿ ನೂರುಲ್ಲಾರವರಿಗೆ ಆಶ್ವಾಸನೆ ನೀಡಿದ್ದಾರೆ. ಇದರಿಂದ ಸೌಹಾರ್ಧತೆ ಹೆಚ್ಚಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು