ಗುರುವಾರ, ಸೆಪ್ಟೆಂಬರ್ 5, 2024

ವಿಐಎಸ್ಎಲ್ ಬಗ್ಗೆ ಕಮಿಟ್ ಮೆಂಟ್ ಇದೆ-ಕುಮಾರ ಸ್ವಾಮಿ



ಸುದ್ದಿಲೈವ್/ಶಿವಮೊಗ್ಗ


ಕೋವಿಡ್ ವರದಿಯನ್ನ ಸಚಿವ ಸಂಪುಟದಲ್ಲಿ ಚರ್ಚಿಸುವ ಬಗ್ಗೆ ಮಾಧ್ಯಮಗಳಿಂದ ತಿಳಿದಿದ್ದೇನೆ. ಅದನ್ನ ಹೊರತು ಪಡಿಸಿ ಕೆಂಪಣ್ಣ ಆಯೋಗದ ವರದಿ, ಮೂಡಾ ಹಗರಣ, ದಿನೇಶ್ ಕುಮಾರ್ ಅಮಾನತ್ತು ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಿ ಎಂದು ಕೇಂದ್ರ ಸಚಿವ ಕುಮಾರ ಸ್ವಾಮಿ ತಿಳಿಸಿದರು


ಅವರು ಶಿವಮೊಗ್ಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುಂಚೆ ಮಾಧ್ಯಮಗಳ ಜೊತೆ ಮಾತನಾಡಿ, ಕೋವಿಡ್ ರಿಪೋರ್ಟ್ ಏನಿದೆ ಗೊತ್ತಿಲ್ಲ, 

ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ ಎಂದರು. 


ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಇಟ್ಟು ಅದನ್ನು  ಚರ್ಚೆ ಮಾಡಲಿ, ಅದನ್ನು ಏಕೆ ಕ್ಯಾಬಿನೆಟ್ ಮುಂದೆ ತರದೇ ಬಿಟ್ಟಿದ್ದಾರೆ?

ಮುಡಾ ಹಗರಣ, ಆಯುಕ್ತ ದಿನೇಶ್ ಕುಮಾರ್ ಅಮಾನತು ವಿಚಾರ, ಈ ಬಗ್ಗೆ ಮಾಧ್ಯಮದವರಿಗೆ ಎಲ್ಲಾ ಗೊತ್ತಿದೆ. ಮಾಧ್ಯಮದವರೇ ಎಲ್ಲಾ ಹೇಳ್ತಿದ್ದಾರೆ ಎಂದರು. 



ಈಗಾಗಲೇ ಹೈಕೋರ್ಟ್ ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಗಿದೆ. 

ಸಿದ್ದರಾಮಯ್ಯ ಅವರ ಪರ ವಕೀಲರು ವಾದ ಮಾಡಲು ಇನ್ನೂ ಸಮಯ ಕೇಳ್ತಿದ್ದಾರೆ ಎಂದರು. 


ವಿಐಎಸ್ ಎಲ್ ಬಗ್ಗೆ ಕಮಿಟ್ ಮೆಂಟ್ ಇದೆ


ವಿಐಎಸ್ ಎಲ್ ನಿರ್ವಹಣೆಗೆ 10-15 ಸಾವಿರ ಕೋಟಿ ಬೇಕು. ವಿಐಎಸ್ ಎಲ್ ಹಾಗು ವೈಜಾಕ್ ಬಗ್ಗೆ ನಮಗೆ ಕಮಿಟ್ ಮೆಂಟ್ ಇದೆ. ಆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ. 10-15 ಸಾವಿರ ಕೋಟಿ ಬೇಕಾಗಿರುವುದರಿಂದ ಸಮಯ ಹಿಡಿಯುತ್ತದೆ ಎಂದರು. 


ಕನ್ನಡದಲ್ಲಿ  ಚಿತ್ರರಂಗದಲ್ಲಿ ಮೀಟೂ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಒಪ್ಪದ ಕೇಂದ್ರ ಸಚಿವ ಕುಮಾರ ಸ್ವಾಮಿ, ಈ ಬಗ್ಗೆ ನನಗೆ ಗೊತ್ತಿಲ್ಲ ನಾನು ಮಾತನಾಡಲ್ಲ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ