ಹೆಚ್ ಡಿ ಕುಮಾರ ಸ್ವಾಮಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹೆಚ್ ಡಿ ಕುಮಾರ ಸ್ವಾಮಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 5, 2024

ಮುಂದಿನ ಚುನಾವಣೆಗೆ ಸಿದ್ದರಾಗಿ-ಅಚ್ಚರಿ ಮೂಡಿಸಿದ ಕುಮಾಸ್ವಾಮಿಯ ಹೇಳಿಕೆ




ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳದ ಬೇರು ಗಟ್ಟಿಯಾಗಿದೆ. ಆದರೆ ಪಕ್ಷಕ್ಕೆ ಬಂದು ಚುನಾವಣೆ ನಂತರ ಬಿಟ್ಟುಹೋಗುತ್ತಿರುವುದರಿಂದ ಪಕ್ಷಕ್ಕೆ  ಹಿನ್ನಡೆಯಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಅಭಿಪ್ರಾಯ ಪಟ್ಟರು. 


ಶುಭಮಂಗಳದಲ್ಲಿ ಜಿಲ್ಲಾ ಜಾತ್ಯಾತೀತ ಜನತಾದಳದಿಂದ ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 


ಅಪ್ಪಾಜಿ ಗೌಡರ ನಂತರ ಇಬ್ವರು ಸಹೋದರಿಯರಿಂದ ಪಕ್ಷ ಭದ್ರಾವತಿ ಮತ್ತು ಗ್ರಾಮಾಂತರದಲ್ಲಿ ಗಟ್ಟಿಯಾಗಿದೆ. ಪ್ರತಿ ಭೂತ್ ಮಟ್ಟದಲ್ಲಿ ಯುವಕರು, ಬೇರೆ ಸಮಾಜದವರನ್ನ ಹಾಗೂ ಮಹಿಳೆಯರನ್ನ  ನೋಂದಣಿ ಮಾಡಲು ತೀರ್ಮಾನಿಸಲಾಗಿದೆ. 


ಜನತೆಯಲ್ಲಿ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅಭಿವೃದ್ಧಿ ಕಾಣ್ತಾ ಇಲ್ಲ, ಜನ ಬೇಸತ್ತಿದ್ದಾರೆ. ಮುಂದಿನ ಮೂರು ವರ್ಷಗಳ ವರೆಗೆ ಅವಧಿ ಇದ್ದರೂ ಕಾಂಗ್ರೆಸ್ ನಾಯಕರ ತಪ್ಪಿನಿಂದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. 


ಯಾವ ಸಮಯದಲ್ಲಾದರೂ ಚುನಾವಣೆ ಬರಬಹುದು ಎಲ್ಲದಕ್ಕೂ ಸಿದ್ದರಾಗಿರಿ ಎಂಬ ಕುಮಾರಸ್ವಾಮಿಯವರ  ಹೇಳಿಕೆ ಕುತೂಹಲ ಮೂಡಿಸಿದೆ. 2028 ರಲ್ಲೇ ಬರಬಹುದು, 2026ರಲ್ಲೇ ಬರಬಹುದು ಆದರೆ 2025 ರಲ್ಲೇ ಚುನಾವಣೆ ಬರಬಹುದು. ಮುಂದಿನ ಚುನಾವಣೆಗೆ ಸಿದ್ದರಾಗಿ ಎಂದು ಹೇಳಿರುವುದು ಕಾರ್ಯಕರ್ತರನ್ನ ಹುರುದುಂಬಿಸಿದೆ. 


ಜಿಲ್ಲೆಯಲ್ಲಿ ಹಳ್ಳಿಗೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಜೆಡಿಎಸ್ ಮಾತ್ರ ಸಮಗ್ರ ಸರ್ಕಾರ ನೀಡಲಿದೆ ಎಂಬ ವಿಶ್ವಾಸ ಹುಟ್ಟಿಸಿದರೆ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಪಡೆಯಬಹುದು. ಮೈತ್ರಿಗೆ ನಮ್ಮಿಂದ ಯಾವುದೇ ದಕ್ಕೆ ತರದಂತೆ ಸಂಘಟನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. 


ಮಗ ನಿಖಿಲ್ ಪಕ್ಷ ಸಂಘನೆ ದೃಷ್ಠಿಯಿಂದ ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಕೊಪ್ಪಳದಲ್ಲಿ ನಿನ್ನೆ ಅಭೂತ ಪೂರ್ವ ಕಾರ್ಯಕ್ರಮ ನಡೆದಿದೆ‌  ಇದರಿಂದ ನನಗೆ ನೆಮ್ಮದಿ ತಂದಿದೆ. ನನಗೂ ಶಿವಮೊಗ್ಗಕ್ಕೂ ನಂಟಿದೆ. 2004 ರಲ್ಲಿ ಉಪಚುನಾವಣೆಯಲ್ಲಿ ಶಿವಮೊಗ್ಗಕ್ಕೆ ಬಂದಿದ್ದೆ. ಆಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಗೆದ್ದಿದ್ದರು. ಮೊದಲಬಾರಿಗೆ ಅವರ ಮನೆಗೆ ಹೋಗಿದ್ದೆ. ಅವರ  ಮೇಲೆ ಬೇರೆರೀತಿಯ ಒತ್ತಡವನ್ನೆಲ್ಲಾ ತರಲಾಗಿತ್ತು. ನನ್ನ ಮತ್ತು ಗ್ರಾಮಾಂತರ ಶಾಸಕಿಯರ ನಡಿವಿನ ಸಹೋದರ ಸಹೋದರಿ ಸಂಬಂಧ ಎಂತಹ  ಒತ್ತಡವನನ್ನೂ ಮುರಿದು ಹಾಕಿದೆ. 


ಮಾನಸಿಕ ವಾಗಿ ಚುನಾವಣೆಗೆ ಸಿದ್ದರಾಗಲು ಕರೆ ನೀಡಿರುವ ಕೇಂದ್ರ ಸಚಿವರು, ಮುಂದಿನ ಸರ್ಕಾರವನ್ನ ರಚಿಸಲು  ಇಬ್ವರು ಸಹೋದರಿಯರ ಜೊತೆಗೆ ಇನ್ನೆರಡು ಸ್ಥಾನ ಬೇಕು. visl ಬಗ್ಗೆ ಆಸೆ ಇಟ್ಟುಕೊಂಡಿದ್ದೀರಿ. ಅದನ್ನ ಹುಸಿ ಮಾಡೊಲ್ಲ. ಅದನ್ನ ಸರಿಪಡಿಸಿವ ಬಗ್ಗೆ ಕಾರ್ಯನಡೆಸುತ್ತಿದ್ದೇನೆ. 2016 ರಲ್ಲಿ ಮುಚ್ಚಲು ತೀರರ್ಮಾನವಾಗಿದೆ. ಅದನ್ನ ಹಿಂಪಡೆಯುವಂತಾಗಬೇಕು. ಮುಂದಿನ ಐವತ್ತು ವರ್ಷದವರೆಗೆ ಹೇಗೆ ಕಾರ್ಖಾನೆ ನಡೆಸುವ ಬಗ್ಗೆ ಯೋಚಿಸಬೇಕಿದೆ. ಏಕಾಏಕಿ ಸರಿಪಡಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. 


ಭದ್ರಾವತಿಯಲ್ಲಿ ಜಗದೀಶ ಮತ್ತು ಪ್ರವೀಣ ಬಗ್ಗೆ ತೊಂದರೆಯಾಗುವ ಬಗ್ಗೆ ಮನವಿ ಮಾಡಲಾಗಿದೆ. ಅದನ್ನ  ಸರಿಪಡಿಸುವೆ.  25 ದಿನಗಳ ವರೆಗೆ  ಕಾರ್ಖಾನೆ ಕಾರ್ಮಿಕರಿಗೆ ಕೆಲಸ ಕೊಡುವ ಕೆಲಸವಾಗಲಿದೆ ಎಂದರು

ವಿಐಎಸ್ಎಲ್ ಬಗ್ಗೆ ಕಮಿಟ್ ಮೆಂಟ್ ಇದೆ-ಕುಮಾರ ಸ್ವಾಮಿ



ಸುದ್ದಿಲೈವ್/ಶಿವಮೊಗ್ಗ


ಕೋವಿಡ್ ವರದಿಯನ್ನ ಸಚಿವ ಸಂಪುಟದಲ್ಲಿ ಚರ್ಚಿಸುವ ಬಗ್ಗೆ ಮಾಧ್ಯಮಗಳಿಂದ ತಿಳಿದಿದ್ದೇನೆ. ಅದನ್ನ ಹೊರತು ಪಡಿಸಿ ಕೆಂಪಣ್ಣ ಆಯೋಗದ ವರದಿ, ಮೂಡಾ ಹಗರಣ, ದಿನೇಶ್ ಕುಮಾರ್ ಅಮಾನತ್ತು ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಿ ಎಂದು ಕೇಂದ್ರ ಸಚಿವ ಕುಮಾರ ಸ್ವಾಮಿ ತಿಳಿಸಿದರು


ಅವರು ಶಿವಮೊಗ್ಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುಂಚೆ ಮಾಧ್ಯಮಗಳ ಜೊತೆ ಮಾತನಾಡಿ, ಕೋವಿಡ್ ರಿಪೋರ್ಟ್ ಏನಿದೆ ಗೊತ್ತಿಲ್ಲ, 

ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ ಎಂದರು. 


ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಇಟ್ಟು ಅದನ್ನು  ಚರ್ಚೆ ಮಾಡಲಿ, ಅದನ್ನು ಏಕೆ ಕ್ಯಾಬಿನೆಟ್ ಮುಂದೆ ತರದೇ ಬಿಟ್ಟಿದ್ದಾರೆ?

ಮುಡಾ ಹಗರಣ, ಆಯುಕ್ತ ದಿನೇಶ್ ಕುಮಾರ್ ಅಮಾನತು ವಿಚಾರ, ಈ ಬಗ್ಗೆ ಮಾಧ್ಯಮದವರಿಗೆ ಎಲ್ಲಾ ಗೊತ್ತಿದೆ. ಮಾಧ್ಯಮದವರೇ ಎಲ್ಲಾ ಹೇಳ್ತಿದ್ದಾರೆ ಎಂದರು. 



ಈಗಾಗಲೇ ಹೈಕೋರ್ಟ್ ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಗಿದೆ. 

ಸಿದ್ದರಾಮಯ್ಯ ಅವರ ಪರ ವಕೀಲರು ವಾದ ಮಾಡಲು ಇನ್ನೂ ಸಮಯ ಕೇಳ್ತಿದ್ದಾರೆ ಎಂದರು. 


ವಿಐಎಸ್ ಎಲ್ ಬಗ್ಗೆ ಕಮಿಟ್ ಮೆಂಟ್ ಇದೆ


ವಿಐಎಸ್ ಎಲ್ ನಿರ್ವಹಣೆಗೆ 10-15 ಸಾವಿರ ಕೋಟಿ ಬೇಕು. ವಿಐಎಸ್ ಎಲ್ ಹಾಗು ವೈಜಾಕ್ ಬಗ್ಗೆ ನಮಗೆ ಕಮಿಟ್ ಮೆಂಟ್ ಇದೆ. ಆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ. 10-15 ಸಾವಿರ ಕೋಟಿ ಬೇಕಾಗಿರುವುದರಿಂದ ಸಮಯ ಹಿಡಿಯುತ್ತದೆ ಎಂದರು. 


ಕನ್ನಡದಲ್ಲಿ  ಚಿತ್ರರಂಗದಲ್ಲಿ ಮೀಟೂ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಒಪ್ಪದ ಕೇಂದ್ರ ಸಚಿವ ಕುಮಾರ ಸ್ವಾಮಿ, ಈ ಬಗ್ಗೆ ನನಗೆ ಗೊತ್ತಿಲ್ಲ ನಾನು ಮಾತನಾಡಲ್ಲ ಎಂದರು.