ವಿಐಎಸ್ಎಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಐಎಸ್ಎಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 5, 2024

ಶತಾಯಗತಾಯ ವಿಐಎಸ್ಎಲ್ ಕಾರ್ಖಾನೆ ಉಳಿಸಿಕೊಡುವೆ

 


ಸುದ್ದಿಲೈವ್/ಶಿವಮೊಗ್ಗ


ನನ್ನ ಮೇಲಿನ ದ್ವೇಷಕ್ಕೆ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ರಾಜ್ಯ ಸರ್ಕಾರ ಇಳಿಯದಂತೆ ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರ್ ಸ್ವಾಮಿ ತಿಳಿ ಹೇಳಿದ್ದಾರೆ. 


ಸುದ್ದಿಗೋಷ್ಠಿಯಲ್ಲಿ ಮಾತಬಾಡಿದ ಅವರು ಗ್ಯಾರೆಂಟಿ ಹೊಡೆತದಲ್ಲಿ ನೀರಾವರಿ, ಪ್ರಕೃತಿ ವಿಕೋಪದ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು ಹಾಗೂ ಕಾರ್ಯಕ್ರಮವೇನು? ಜನತೆ ಮುಂದೆ ಭ್ರಷ್ಠಾಚಾರ, ವರ್ಗಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಬಡವರಿಗೆಕೊಡುವ ಹಣದಲ್ಲೂಹಗರಣದ ಬಗ್ಗೆ ಚರ್ಚೆ ಆಗುತ್ತಿದೆ ವಿನಹ ಸಮಗ್ರ ಅಭಿವೃದ್ದಿ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದು ದೂರಿದರು‌ 


 ಸಿಎಂ ನವರು ಸಂಗೊಳ್ಳಿ ರಾಯಣ್ಣನನ್ನ ಹೋಲಿಕೆ ಮಾಡಿಕೊಂಡು ಸ್ವಪಕ್ಷೀಯವರೇ ನನ್ನನ್ನ ಮುಗಿಸಲು ಹೊರಟಿದ್ದಾರೆ ಎಂದು ಹೇಳುತ್ತಿರುವ ಸಿಎಂ  ಈಗ ವಿಪಕ್ಷಗಳ ವಿರುದ್ಧ ಮಾತನಾಡುತ್ತಿಲ್ಲ. ಅವರ ತಪ್ಪನ್ನ ಬಯಲಿಗೆ ಎಳೆದ ಮೇಲೆ ವಿಪಕ್ಷಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅವರ ಹೇಳಿಕೆ ಬದಲಾಗಿದೆ.‌ ಅವರ ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ದೂರಿದರು. 


ರಸ್ತೆಯ ಗುಂಡಿ ಮುಚ್ಚಲು ಸರ್ಜಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿಙದೆ ಹಿಮಾಚಲ ಪ್ರದೇಶದಲ್ಲಿ ಅಭಿವೃದ್ಧಿ ಮತ್ತು ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಹಾಡಿಹೊಗಳಲಾಗುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ. ಅಲ್ಲಿನ ಕಾಂಗ್ರೆಸ್ ಜನರಿಗೆ ಬದುಕುವ ಕಾರ್ಯಕ್ರಮನೀಡಬೇಕು. ಇದೇ ಪರಿಸ್ಥಿತಿ ಮುಂದುವರೆದರೆ ಅದೇ ಪರಿಸ್ಥಿತಿ ಕರ್ನಾಟಕಕ್ಕೆ ಬರುವ ದಿನಗಳು ದೂರವಿಲ್ಲ ಎಙದರು. 


visl ಸಂಸ್ಥೆ ಮಾರಾಟ ಮಾಡಲು ರಾಜ್ಯ ಸರ್ಕಾರ ಹವಣಿಸುತ್ತಿದೆ. ಅದನ್ನ ಉಳಿಸಲು ಹರಸಾಹಸ ಪಡುತ್ತಿರುವೆ. ರಾಜ್ಯದಲ್ಲಿ ಆಡಳಿತ ನಡೆಸಿದಂತೆ ಕೇಂದ್ರದಲ್ಲಿ ಆಡಳಿತ ನಡೆಸುವುದು ಕಷ್ಟ. ಪ್ರಧಾನಿಗೆ ಗೌರವ ತರಬೇಕು. 40 ಪಿಎಸ್ಎಲ್ ಯುನಿಟ್ ನಲ್ಲಿ 8 ಸಂಸ್ಥೆಗಳಿವೆ. ಇವುಗಳಿಗೆ ಶಕ್ತಿ ತುಂಬ ಬೇಕಿದೆ. ನನಗೆ ಒತ್ತಡವಿದೆ ನನ್ನ ಬಗ್ಗೆ ಲಘುವಾಗಿ ಮಾತನಾಡಲಾಗುತ್ತಿದೆ. 


ನನ್ನ ಮತ್ತು ರಾಜ್ಯ ಸರ್ಕಾರದ ನಡುವೆ ಹೊಡೆದಾಟಗಳು ಏನೇ ಇದ್ದರೂ ಅಭಿವೃದ್ಧಿ ಕಡೆ ಹೋಗಬೇಕಿದೆ. ನಾನು ಸಿಎಂ ಆದಾಗ ಕೇಂದ್ರದ ಜೊತೆ ಸಂಘರ್ಷಕ್ಕೆ ಇಳಿದಿರಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಸಂಘರ್ಷಕ್ಕೆ ಇಳಿಯುತ್ತಿದೆ. ಉತ್ತಮ ಬೆಳವಣಿಗೆ ಅಲ್ಲ ಎಂದು ಕಿವಿ ಮಾತಾಡಿದರು. 


visl ಉಳಿಸಲು ಹಗಲು ರಾತ್ರಿ ಪ್ರಯತ್ನ ಮುಂದುವರೆಸಿದ್ದೇನೆ.  ನಮ್ಮ ಇಲಾಖೆಗೆ ದೊಡ್ಡಮಟ್ಟದ ಅನುದಾನ ಇಲ್ಲ. ವಿಐಎಸ್ಎಲ್ ನ್ನ 2016 ರಲ್ಲಿ ಮಾರಾಟ ಮಾಡಲು ತೀರ್ಮಾನವಾಗಿದೆ. ಪುನಶಚೇತನಕ್ಕೆ 10-15 ಸಾವಿರ ಕೋಟಿ ರೂ. ಹಣ ಬೇಕು.ಸೇಲ್ ನಿಂದ ಜೀವ ಕೊಡಬೇಕು. ಸಮಯ ತೆಗೆದುಕೊಳ್ಳಲಿದೆ. ನನ್ನ ಮೇಲೆ ಅನುಮಾನ ಬೇಡ, ಎಷ್ಟೆ ಕಷ್ಟಬಿದ್ದರೂ ಉಳಿಸಲು ಕಟಿಬದ್ದನಾಗಿರುವೆ ಎಂದು ವಿಶ್ವಾಸದ ಮಾತುಗಳನ್ನಾಡಿದರು. 


ವೈಜಾಕ್ ಸ್ಟೀಲ್ ಪ್ಲಾಂಟ್ 6000 ಎಕರೆಯಲ್ಲಿದೆ. 12 ವರ್ಷ ನಿರಂತರವಾಗಿ ಲಾಭದಲ್ಲಿದ್ದ ಫ್ಯಾಕ್ಟರಿ ಈಗ ಮಾರಾಟಕ್ಕೆ ಇಡಲಾಗಿದೆ. ಪ್ರಧಾನಿ ವಿಷನ್ ಇದೆ. ವಿಕಸಿತ ಮತ್ತು ಆತ್ಮನಿರ್ಭರ ಭಾರತ ಕನಸು ಹೊಂದಿರುವ ಪ್ರಧಾನಿಗೆ ಈ ಕಾರ್ಖಾನೆಯನ್ನ‌ ಲಾಭಕ್ಕೆ ತಂದು ಅದರ ಮೂಲಕ ವಿಐಎಸ್ಎಲ್ ಕಾರ್ಖಾನೆಯನ್ನ ಲಾಭಕ್ಕೆ ಕೊಙಡೊಯ್ಯುವ  ಕಮಿಟ್ ಮೆಂಟ್ ಹೊಂದಿದ್ದೇನೆ. ಇದು ರಾತ್ರೋರಾತ್ರಿ ಆಗುವ ಕೆಲಸವಲ್ಲ ಎಂದು ವಿವರಿಸಿದರು. 


ಈ ವೈಜಾಕ್ ಗೆ 35 ಸಾವಿರ ಕೋಟಿ ಹಣ ಬೇಕಿದೆ. ಇದನ್ನ ಜಾಣತನದಿಂದ ಅಭಿವೃದ್ಧಿ ಪಡಿಸಿ ನಂತರ ವಿಐಎಸ್ ಎಲ್ ಗೆ ಹಣತರಬೇಕಿದೆ. ತಪ್ಪು ಆಡಳಿತ ಮಂಡಳಿಯಿಂದ ನಡೆದಿದೆ. ಸುನಾಮಿ ವಿರುದ್ಧ ನಡೆಯಬೇಕಿದೆ ಎಂದರು.

ವಿಐಎಸ್ಎಲ್ ಬಗ್ಗೆ ಕಮಿಟ್ ಮೆಂಟ್ ಇದೆ-ಕುಮಾರ ಸ್ವಾಮಿ



ಸುದ್ದಿಲೈವ್/ಶಿವಮೊಗ್ಗ


ಕೋವಿಡ್ ವರದಿಯನ್ನ ಸಚಿವ ಸಂಪುಟದಲ್ಲಿ ಚರ್ಚಿಸುವ ಬಗ್ಗೆ ಮಾಧ್ಯಮಗಳಿಂದ ತಿಳಿದಿದ್ದೇನೆ. ಅದನ್ನ ಹೊರತು ಪಡಿಸಿ ಕೆಂಪಣ್ಣ ಆಯೋಗದ ವರದಿ, ಮೂಡಾ ಹಗರಣ, ದಿನೇಶ್ ಕುಮಾರ್ ಅಮಾನತ್ತು ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಿ ಎಂದು ಕೇಂದ್ರ ಸಚಿವ ಕುಮಾರ ಸ್ವಾಮಿ ತಿಳಿಸಿದರು


ಅವರು ಶಿವಮೊಗ್ಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುಂಚೆ ಮಾಧ್ಯಮಗಳ ಜೊತೆ ಮಾತನಾಡಿ, ಕೋವಿಡ್ ರಿಪೋರ್ಟ್ ಏನಿದೆ ಗೊತ್ತಿಲ್ಲ, 

ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ ಎಂದರು. 


ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಇಟ್ಟು ಅದನ್ನು  ಚರ್ಚೆ ಮಾಡಲಿ, ಅದನ್ನು ಏಕೆ ಕ್ಯಾಬಿನೆಟ್ ಮುಂದೆ ತರದೇ ಬಿಟ್ಟಿದ್ದಾರೆ?

ಮುಡಾ ಹಗರಣ, ಆಯುಕ್ತ ದಿನೇಶ್ ಕುಮಾರ್ ಅಮಾನತು ವಿಚಾರ, ಈ ಬಗ್ಗೆ ಮಾಧ್ಯಮದವರಿಗೆ ಎಲ್ಲಾ ಗೊತ್ತಿದೆ. ಮಾಧ್ಯಮದವರೇ ಎಲ್ಲಾ ಹೇಳ್ತಿದ್ದಾರೆ ಎಂದರು. 



ಈಗಾಗಲೇ ಹೈಕೋರ್ಟ್ ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಗಿದೆ. 

ಸಿದ್ದರಾಮಯ್ಯ ಅವರ ಪರ ವಕೀಲರು ವಾದ ಮಾಡಲು ಇನ್ನೂ ಸಮಯ ಕೇಳ್ತಿದ್ದಾರೆ ಎಂದರು. 


ವಿಐಎಸ್ ಎಲ್ ಬಗ್ಗೆ ಕಮಿಟ್ ಮೆಂಟ್ ಇದೆ


ವಿಐಎಸ್ ಎಲ್ ನಿರ್ವಹಣೆಗೆ 10-15 ಸಾವಿರ ಕೋಟಿ ಬೇಕು. ವಿಐಎಸ್ ಎಲ್ ಹಾಗು ವೈಜಾಕ್ ಬಗ್ಗೆ ನಮಗೆ ಕಮಿಟ್ ಮೆಂಟ್ ಇದೆ. ಆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ. 10-15 ಸಾವಿರ ಕೋಟಿ ಬೇಕಾಗಿರುವುದರಿಂದ ಸಮಯ ಹಿಡಿಯುತ್ತದೆ ಎಂದರು. 


ಕನ್ನಡದಲ್ಲಿ  ಚಿತ್ರರಂಗದಲ್ಲಿ ಮೀಟೂ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಒಪ್ಪದ ಕೇಂದ್ರ ಸಚಿವ ಕುಮಾರ ಸ್ವಾಮಿ, ಈ ಬಗ್ಗೆ ನನಗೆ ಗೊತ್ತಿಲ್ಲ ನಾನು ಮಾತನಾಡಲ್ಲ ಎಂದರು.