ಸುದ್ದಿಲೈವ್/ಶಿವಮೊಗ್ಗ
ಗಾಂಧಿ ಬಜಾರ್ ನ ಆನ್ವೇರಪ್ಪನ ಕೇರಿ ತಿರುವಿಗೆ ಗಪಪತಿ ಮೆರವಣಿಗೆ ಬರುವ ಮುಂಚೆ ನೂಕುನುಗ್ಗಲು ಆರಂಭವಾಗಿದೆ. ಕಿರಿದಾದ ಜಾಗದಲ್ಲಿ ಪೊಲೀಸರ ವ್ಯಾನು ಒಂದು ಕಡೆ ನಿಂತಿದ್ದರೆ ಮತ್ತೊಂದು ಕಡೆ ಪೊಲೀಸರ ಸಿಬ್ಬಂದಿಯ ಸರ್ಪಗಾವಲಿನಿಂದ ವಿಸರ್ಜನ ಮೆರವಣಿಗೆಯಲ್ಲಿದ್ದವರಿಗೆ ನೂಕು ನುಗ್ಗಲು ಉಂಟಾಗಿದೆ.
ಉಪ್ಪಾರ ಕೇರಿ ತಿರುವಿನಲ್ಲಿ ಇನ್ನೂ ಗಣಪತಿ ತಲುಪಿಲ್ಲ ಆಗಲೇ ಮೆರವಣಿಗೆಯಲ್ಲಿದ್ದ ಸಾರ್ವಜನಿಕರಿಗೆ ನೂಕುನುಗ್ಗಲು ಉಂಟಾಗಿದೆ. ಕಳೆದರೆಡು ವರ್ಷದಿಂದ ಇದ್ದ ಗಣಪತಿ ಮೆರವಣಿಗೆ ಜನಕಡಿಮೆ ಭಾಗಿಯಾಗಿದ್ದಾರೆ. ಆನ್ವೇರಪ್ಪನ ಕೇರಿ ತಿರುವಿನಬಳಿ ಕರ್ಪೂರ ಹಚ್ಚುತ್ತಿದ್ದಂತೆ ಪೊಲೀಸರು ಚದುರಿಸಲು ಯತ್ನಿಸಿದ್ದಾರೆ.
ಆದರೂ ಆನ್ವರಪ್ಪನ ಕೇರಿ ತಿರುವಿನಲ್ಲಿ ಭರ್ಜರಿ ಪೊಲೀಸ್ ಬಂದೋ ಬಸ್ತ್ ಪ್ರತಿವರ್ಷದಂತೆ ಈ ವರ್ಷವೂ ಮಾಡಿಕೊಳ್ಳಲಾಗಿದೆ. ಪೊಲೀಸರು ಸಹ ಗುಂಪನ್ನ ತಿಳಿಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಲ್ಲಿ ಸಾರ್ವಜನಿಜರ ಜೊತೆ ಜಗಳಕ್ಕೆ ಬೀಳುತ್ತಿದ್ದಾರೆ.