Girl in a jacket

ಶಾಂತಿ ಯುತವಾಗಿ ಬಜಾರ್‌ನ ಮಹಾದ್ವಾರದ ಬಳಿ ಸಾಗಿದ ಗಣಪ-ಮಾಧ್ಯಮದವರೊಂದಿಗೆ ಪೊಲೀಸ್ ಕಿರಿಕ್

 


ಸುದ್ದಿಲೈವ್/ಶಿವಮೊಗ್ಗ


ಗಾಂಧಿಬಜಾರ್‌ನ ಸುನ್ನಿ ಜಾಮೀಯ ಮಸೀದಿನ್ನ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ದಾಟಿದೆ. ತುಂಬ ಸರಳವಾಗಿ ಡೊಳ್ಳ್ಳು ಡಕ್ಕೆ ನಾದಗಳಿಲ್ಲದೆ ಸಿನಿಮಾ ರಸ್ತೆಯಿಂದ ಸಾಗಿ ಬಂದ ಗಣಪನ ಮೆರವಣಿಗೆ ಬಜಾರ್ ನ ಮಹಾದ್ವಾರದ ಕಡೆ ಸಾಗಿದೆ. 


ಯಾವಾಗಲೂ ಈ ಸ್ಥಳದಲ್ಲಿ ಸಂಗೀತದ ವಾದ್ಯಗಳು ಮೊಳಗುತ್ತಿದ್ದವು. ಆದರೆ ಈ ಬಾರಿ ಯಾವುದೇ ವಾದ್ಯಗಳು ಇಲ್ಲದೆ ಗಣಪ ಸಾಗಿ ಬಂದಿದೆ.  ಶಾಂತಿಯುತವಾಗಿ ಮೆರವಣಿಗೆ ನಡೆದಿದೆ.


ಈ ವೇಳೆ ಪೊಲೀಸರ ಮಾಮೂಲಿ ಸರ್ಪಗಾವಲಿನ್ನ ಹಾಕಲಾಗಿದೆ. ಎಂದಿನಂತೆ  ಕರ್ಪೂರವನ್ನ ಸುಡಲಾಗಿದೆ. ಭಾರಿ ಗಾತ್ರದಲ್ಲಿ ಕರ್ಪೂರವನ್ನ ಸುಡಲಾಗಿದೆ. ಹೋಮದ ರೀತಿ ಸುಡಲಾಗಿದೆ.‌ 



ಆನ್ವೇರಪ್ಪನ ಕೇರಿಯ ಬಳಿ ಪೊಲೀಸ್ ಮತ್ತು‌ಮಾಧ್ಯಮದವರ ಜೊತೆ ಕಿರಿಕ್ ಆಗಿದೆ. ಮಾಧ್ಯಮದವರ ಸ್ವಲ್ಪ ತಿರಿಗಿದ್ದಕ್ಕೆ ಪೊಲಿಸರಿಗೆ ಸ್ವಲ್ಪ ತಾಗಿದ್ದಕ್ಕೆ ಪೊಲೀಸರು ತಾಳ್ಮೆ ಕಳೆದುಕೊಂಡಿದ್ದಾರೆ. ಮಸೀದಿ ಬಳಿ ತಾಳ್ಮೆ ಕಳೆದುಕೊಂಡೆ ಕರ್ತವ್ಯದಲ್ಲಿ ಪೊಲೀಸರು ಇದ್ದಂಗೆ ಕಾಣುತ್ತಿತ್ತು. ಮೊದಲು ಭಕ್ತರೊಂದಿಗೆ ಕಿರಿಕ್ ನಂತರ ಮಾಧ್ಯಮಗಳೊಂದಿಗೆ ಕಿರಿಕ್ ಆಗಿದೆ. 


ಆನ್ವೇರಪ್ಪನ ತಿರುವಿನ ಎಡಭಾಗದಲ್ಲಿ ಮಾಧ್ಯಮದವರು ನಿಂತಿದ್ದರು. ಈ ವೇಳೆ  ಕಿರಿಕ್ ಆಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು