Girl in a jacket

ಹೊಸಮನೆ ಯುವಕರು ಕಸ ಹಾಕುವವರಿಗೆ ತಿಳುವಳಿಕೆ ನೀಡಿದ್ದು ಹೇಗೆ?

                   ಹೊಸಮನೆಯ ಯುವಕ ಮನೋಜ್


ಸುದ್ದಿಲೈವ್/ಶಿವಮೊಗ್ಗ

ನಗರದ ಹೊಸಮನೆಯ 4 ನೇ ತಿರುವಿನ ಯುವಕರಿಂದ ಹೊಸಮನೆ 4 ನೇ ತಿರುವು ಚರ್ಚ್ ರೋಡ್‌ನಲ್ಲಿ ಕೆಲವು ದಿನಗಳಿಂದ ಜನರು ರಸ್ತೆಯಲ್ಲಿಯೇ ಕಸ ಹಾಕುತ್ತಿದ್ದರು. ಕಸ ವಿಲೇವಾರಿ ವಾಹನ ಬಂದರೂ ಕಸ ಹಾಕದ ಜನರು ರಸ್ತೆ ಬದಿಯಲ್ಲಿ ಕಸ ಬಿಸಾಕುತ್ತಿದ್ದರು. 

ಇದನ್ನು ಕಂಡ 4ನೇ ತಿರುವಿನ ಯುವಕರಾದ ಮನೋಜ್ ವಿನಾಯಕ, ಪ್ರಜ್ವಲ್, ಸುರೇಶ್ ಹಾಗೂ ಸ್ನೇಹಿತರು ಸೇರಿ ಈ ರಸ್ತೆಯನ್ನು ಸ್ವಚ್ಛಗೊಳಿಸಿದರು ಹಾಗೂ ಈ ರಸ್ತೆಯಲ್ಲಿ ಮತ್ತೆ ಕಸ ಹಾಕಿದರೆ 500 ರೂ. ದಂಡವನ್ನು ವಿಧಿಸು ವುದಾಗಿ ನಾಮಫಲಕ ಹಾಕಿರುತ್ತಾರೆ ಹಾಗೂ ಕೆಲ ಭಾಗದಲ್ಲಿ ಸಿಸಿಕ್ಯಾಮರವನ್ನು ಅಳವಡಿಸಿರುತ್ತಾರೆ. 

ತಮ್ಮ ತಮ್ಮ ಮನೆಯ ಕಸವನ್ನು ಕಸ ವಿಲೇವಾರಿ ಮಾಡುವ ವಾಹನ ಬಂದಾಗ ಅದರಲ್ಲಿ ಕಸ ಹಾಕಬೇಕು ಹಾಗೂ ಒಣ ಕಸ, ಹಸಿ ಕಸ ಬೇರ್ಪಡಿಸಿ ನೀಡಬೇಕು ಎಂದು ವಿನಂತಿಸಿದ್ದಾರೆ. ಕಸವನ್ನು ರಸ್ತೆ ಬದಿಯಲ್ಲಿ ಹಾಕುವುದರಿಂದ ಕಸ ಕೊಳೆತು ಸೊಳ್ಳೆ ನೊಣಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ರೋಗ ಹರಡಲು ಪ್ರಾರಂಭವಾಗುತ್ತದೆ ಆದರಿಂದ ಈ ಬಡಾವಣೆಯ ಜನರು ದಯಮಾಡಿ ಕಸವನ್ನು ತಮ್ಮ ಮನೆಯಲ್ಲೇ ಸಂಗ್ರಹಿಸಿ ಬೆಳಿಗ್ಗೆ ಬರುವ ಕಸದ ವಾಹನಕ್ಕೆ ಕಸವನ್ನು ನೀಡಬೇಕಾಗಿ ಮನೋಜ್ ಕೋರಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು