ಸುದ್ದಿಲೈವ್/ಶಿವಮೊಗ್ಗ
ದೇಶದಲ್ಲಿ ಬಡ ರೈತರ ರಕ್ತ ಹೀರುತ್ತಿರುವ ಅರಣ್ಯ ಮತ್ತು ವಕ್ಫ್ ಕಾಯಿದೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳ ಹಾಲಪ್ಪ ಆಗ್ರಹಿಸಿದ್ದಾರೆ.
ನಗರದ ಬಿಜೆಪಿ ಕಚೇರಿ ಎದುರು ಮಾಧ್ಯಮಗಳ ಜೊತೆ ಮಾತನಾಡಿ, ಸಾಗರದಲ್ಲೂ ಆಶ್ರಯ ನಿವೇಶನವೊಂದನ್ನ ಯಾರೋ ವಕ್ಫ್ ಬೋರ್ಡ್ ಗೆ ಬರೆದು ಕೊಟ್ಟಿದ್ದು, ಅಲ್ಲಿ ಮಸೀದಿ ನಿರ್ಮಿಸಲು ಹೊರಟಿದ್ದಾರೆ. ಗಣಪತಿ ಕೆಯ ಜಾಗವನ್ನೂ ವಕ್ಫ್ ಎಂದಿತ್ತು. ಅದನ್ನ ನಾನೇ ಸಮರ್ಪಕವಾಗಿ ತಿರಸ್ಕರಿಸಿದೆ ಎಂದು ಆರೋಪಿಸಿದರು.
ನಗರದ ಸೈಟ್ ಗಳು ಮತ್ತು ರೈತರ ಜಮೀನುಗಳನ್ನ ವಕ್ಫ್ ತನ್ನ ಜಮೀನು ಎಂದು ಹೇಳಿಕೊಳ್ಳುತ್ತಿದೆ. ಸಚಿವ ಜಮೀರ್ ಅಹ್ಮದ್ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ವಕ್ಫ್ ಕಾಯ್ದೆಯೇ ಸರಿಯಿಲ್ಲದ ಕಾರಣ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಹೊರಟಿದೆ. ಯಾರ ಸ್ವಾಧೀನದಲ್ಲಿ ಇರುತ್ತದೆ ಅದು ರೈತರ ಆಸ್ತಿಯಾಗಬೇಕು ಎಂದು ಆಗ್ರಹಿಸಿದರು.
ಶಾಂತಿ ಕದಡುವ ಯತ್ನಿಸುತ್ತಿರುವ ಜಮೀರ್ ಅವರ ಪ್ರಯತ್ನ ಕೈಗೂಡಲ್ಲ. ಎರಡು ಕಾಯ್ದೆಯನ್ನ ತಿದ್ದುಪಡಿ ಮಾಡಬೇಕಿದೆ. ಒಂದು ವಕ್ಫ್ ಮತ್ತೊಂದು ಅರಣ್ಯ ಕಾಯ್ದೆಯನ್ನ ತಿದ್ದುಪಡಿ ಮಾಡಬೇಕಿದೆ. ಡೀಮ್ಡ್ ಫಾರೆಸ್ಟ್, ಪ್ರೊಟೆಸ್ಟೆಡ್ ಫಾರೆಸ್ಟ್ ಎಂದು ಅರಣ್ಯ ಹೇಳಿದರೆ ಮುಗೀತು. ನೋಟೀಸ್ಸು, ಮತ್ತೊಂದು ಮಗದೊಂದಿಗಾಗಿ ಹೋರಾಡಬೇಕಾಗುತ್ತದೆ. ಅದೇ ರೀತಿ ವಕ್ಫ್ ಬೋರ್ಡ್ ಸಹ ಇದು ನಮ್ಮ ಜಮೀನು ಎಂದು ಹೇಳಿಕೊಂಡರೆ ಮುಗೀತು. ಅದನ್ನ ಈ ದೇಶದ ಕೋರ್ಟ್ ನಲ್ಲಿ ಪ್ರಶ್ನಿಸುವಂತಿಲ್ಲ. ಅವರದ್ದೇ ಆದ ವಕ್ಫ್ ಟ್ರಿಬ್ಯೂನಲ್ ಗೆ ಹೋಗಿ ಫೈಟ್ ಮಾಡಬೇಕಿದೆ. ಅವರದ್ದೇ ಹುಟ್ಟು ಅವರದ್ದೇ ದೋಣಿ ಎಂಬಂತೆ ವಕ್ಫ್ ವರ್ತಿಸುತ್ತದೆ ಎಂದು ದೂರಿದರು.
ಜಮೀರ್ ಅಹ್ಮದ್ ಒಂದು ಇಂಚು ಸಹ ವಕ್ಫ್ ಬೋರ್ಡ್ ಆಸ್ತಿ ಬಿಡೊಲ್ಲ ಎಂದಿದ್ದಾರೆ. ಆ ಹೇಳಿಕೆ ಹಿಂಪಡೆಯಬೇಕಿದೆ. ಅವರ ಆಸ್ತಿ ಅವರು ಇಟ್ಟುಕೊಳ್ಳಲಿ, ತಿದ್ದುಪಡಿಯ ಮೂಲಕವೇ ವಕ್ಫ್ ಮತ್ತು ಅರಣ್ಯ ಇಲಾಖೆಯ ತಿದ್ದುಪಡಿಯಾಗಬೇಕಿದೆ ಎಂದರು.
ಅದರಂತೆ ರಾಘವೇಂದ್ರ ಸಹ ವಕ್ಫ್ ಬೋರ್ಡ್ ವಿರುದ್ಧ ಹೌಹಾರಿದ್ದಾರೆ. 1 ಲಕ್ಷ ಎಕರೆ ಇದ್ದ ವಕ್ಫ್ ಜಮೀನು ಇಂದು 8-10 ಲಕ್ಷ ಎಕರೆ ಜಮೀನು ಆಗಿರುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಜಂಟಿ ಸಂಸದೀಯ ಸಮಿತಿಯ ಮುಂದೆ ವಕ್ಫ್ ಬೋರ್ಡ್ ತಿದ್ದುಪಡಿ ಚರ್ಚೆ ಆಗಲಿದೆ. ಚಳಿಗಾಲದ ಅಧಿವೇಶನದಲ್ಲಿ ಸುಧೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದರು.
ಪಾರ್ಲಿಮೆಂಟ್ ನಲ್ಲಿ ವಕ್ಫ್ ಬಿಲ್ ತಿದ್ದುಪಡಿ ತರುವ ಮುನ್ನ ಈ ಎಲ್ಲಾ ಆಸ್ತಿಯನ್ನ ವಕ್ಫ್ ಆಸ್ತಿ ಎಂದು ಹೇಳಿಕೊಳ್ಳುವ ಮೂಲಕ ಷಡ್ಯಂತ್ರ ನಡೆಯುತ್ತಿದೆ ಎಂದು ದೂರಿದರು.