ಸುದ್ದಿಲೈವ್/ಶಿವಮೊಗ್ಗ
ಸೂಡಾ ಅರ್ಜಿ ಸ್ವೀಕೃತ ಅವಧಿಯನ್ನ ವಿಸ್ತರಿಸಾಗಿದೆ. ಈ ಹಿಂದೆ ಅರ್ಜಿಯನ್ನ ಪಡೆಯಲು ಸೆ.30 ಕೊನೆಯ ದಿನಾಂಕ ಮತ್ತು ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಅ.31 ಎಂದು ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಭರ್ತಿ ಮಾಡಿದ ಅರ್ಜಿಯ ಅವಧಿಯನ್ನ ವಿಸ್ತರಿಸಲಾಗಿದೆ.
ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಿವಮೊಗ್ಗದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಆಗಸ್ಟ್-2024ರಲ್ಲಿ ಪ್ರಕಟಣೆ ನೀಡಲಾಗಿದ್ದು, ನಿವೇಶನ ಹಂಚಿಕೆಯ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ದಿ:25/11/2024ರವರೆಗೆ ವಿಸ್ತರಿಸಲಾಗಿದೆ ಎಂದು ಶಿ-ಭ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಊರುಗಡೂರಿನಲ್ಲಿ 437 ನಿವೇಶನಕ್ಕೆ ಅರ್ಜಿಯನ್ನ ಕರೆಯಲಾಗಿದ್ದು 12 ಸಾವಿರ ಅರ್ಜಿಗಳನ್ನ ಹಂಚಲಾಗಿತ್ತು. ಭರ್ತಿ ಮಾಡಿದ ಅರ್ಜಿಗಳು ಸಲ್ಲಿಕೆಗೆ ಸಮಯಬೇಕಾಗಿರುವುದರಿಂದ ಅರ್ಜಿ ಅವಧಿಯನ್ನ ವಿಸ್ತರಿಸಿರುವುದಾಗಿ ತಿಳಿದು ಬಂದಿದೆ.