ಸುದ್ದಿಲೈವ್/ಶಿವಮೊಗ್ಗ
ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬಿರ್ಸಾ ಮುಂಡಾ ಅವರ 150 ನೇ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಡಿಸಿ ಕಚೇರಿಯವರೆಗೆ ಏಕತೆಗಾಗಿ ಓಟ ಕಾರ್ಯಕ್ರಮ ನಡೆದಿದೆ. ಆದರೆ ಈ ಓಟ ಏತಕ್ಕಾಗಿ ನಡೆದಿದೆ ಎಂಬುದೇ ಗೊಂದಲ ಮೂಡಿಸಿದೆ.
ಕಾರಣ, ಇಂದು ಬೆಳಿಗ್ಗೆ 8-30 ಕ್ಕೆ ಬಿಜೆಪಿ ಕಚೇರಿ ಎದುರು ಏಕತೆಗಾಗಿ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 9 ಗಂಟೆಗೆ ತಹಶೀಲ್ದಾರ್ ಕಚೇರಿಯಲ್ಲಿ ಸಂಸದ ರಾಘವೇಂದ್ರ ಅವರ ಕಚೇರಿ ಉದ್ಘಾಟನೆ ಹಮ್ಮಿಕೊಳ್ಳಲಾಗಿತ್ತು. ಎರಡೂ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ತಡವಾಗಿಯೇ ಆರಂಭಗೊಂಡಿದೆ.
ಏಕತಾ ಓಟ ಜಿಲ್ಲಾಧಿಕಾರಿಗಳ ಕಚೇರಿಗೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ತಹಶೀಲ್ದಾರ್ ಕಚೇರಿಯ ವರೆಗೂ ಎಲ್ಲಾ ಬಿಜೆಪಿ ನಾಯಕರು ಕಾರ್ಯಕರ್ತರು ಓಡಿಕೊಂಡು ಬಂದು ಓಟವನ್ನ ಮುಗಿಸಿದ್ದು ಮಾತ್ರ ಗೊಂದಲ ಮೂಡಿಸಿದೆ. ಸಂಸದರ ಕಚೇರಿ ಉದ್ಘಾಟನೆಗಾಗಿ ಏಕತೆಯ ಓಟ ನಡೆಯಿತೋ, ಅಥವಾ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಬಿರ್ಸಾ ಮುಂಡಾರವರ ಜನ್ಮದಿನ ಆಚರಣೆಗೆ ಕಾರ್ಯಕ್ರಮ ನಡೆಯಿತೋ ಎಂಬ ಗೊಂದಲ ಮೂಡಿದಂತು ನಿಜ!
ಕಾರ್ಯಕ್ರಮದ ವರದಿ
ಕಾರ್ಯಕ್ರಮದ ಆರಂಭದಲ್ಲಿ ಬಿಜೆಪಿ ಕಚೇರಿ ಮುಂದೆ ಬಿಜೆಪಿ ನಾಯಕರು ಸರ್ಧಾರ್ ವಲ್ಲಭಾಯ್ ಪಟೇಲ್ ಅಮರ್ ರಹೇ, ಅಮರ್ ರಹೇ ಎಂಬ ಘೋಷಣೆ ಕೂಗಲಾಯಿತು. ಈ ವೇಳೆ ಮಾತನಾಡಿದ ಸಂಸದ ರಾಘವೇಂದ್ರ ಮಾತನಾಡಿ, ಛಿದ್ರವಾಗಿದ್ದ ದೇಶವನ್ನ ಒಂದು ಗೂಡಿಸಿದವರು ಸರ್ದಾರ್ ವಲ್ಲಭಾಯ್ ಪಟೇಲ್ ಆಗಿದ್ದಾರೆ. ಐಕ್ಯತೆಗೆ ದಕ್ಕೆ ತರುವವರಿಗೆ ಪಟೇಲ್ ಮಾದರಿಯಾಗಲಿ ಎಂದರು.
ಪಟೇಲ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹುಟ್ಟುಹಬ್ಬವನ್ನ ಆಚರಿಸಲು ಕೇಂದ್ರದ ಕರೆ ಹಿನ್ನಲೆಯಲ್ಲಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಇಬ್ಬರೂ ನಾಯಕರು ಹಾಕಿಕೊಟ್ಟ ಮೇಲ್ಫಂಕ್ತಿಯಲ್ಲಿ ನಾವೆಲ್ಲ ಸಾಗೋಣವೆಂದು ಕರೆ ನೀಡಿದರು. ಈ ವೇಳೆ ಕಚೇರಿಯಿಂದ ಜೈಲ್ ವೃತ್ತ, ನಂಜಪ್ಪ ಆಸ್ಪತ್ರೆ, ಶಿವಮೂರ್ತಿ ವೃತ್ತ, ಮೂಲಕ ತಹಶೀಲ್ದಾರ್ ಕಚೇರಿಯವರೆಗೆ ಜಾಥ ನಡೆದಿದೆ
ಶಾಸಕ ಚೆನ್ನಬಸಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್, ಮಾಜಿ ಸಚಿವ ಹರತಾಳ ಹಾಲಪ್ಪ, ಎಂಎಲ್ ಸಿ ಡಿ.ಎಸ್.ಅರುಣ್, ಮಾಜಿ ಎಂಎಲ್ ಸಿ ಆರ್.ಕೆ ಸಿದ್ದರಾಮಣ್ಷ, ಮಾಜಿ ಸೂಡ ಅಧ್ಯಕ್ಷ ಎನ್ ಜೆ ನಾಗರಾಜ್, ಐಡಿಯಲ್ ಗೋಪಿ, ವಿನ್ಸಂಟ್ ರೋಡ್ರಿಗೋಸ್, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕರಾದ ಕೆ ಮೊದಲಾದವರು ಭಾಗಿಯಾಗಿದ್ದರು.