ರೈಲಿಗೆ ಸಿಲುಕಿ ಮೆಗ್ಗಾನ್ ಹೊರಗುತ್ತಿಗೆ ಮಹಿಳ ಸಿಬ್ಬಂದಿ ಆತ್ಮಹತ್ಯೆ



ಸುದ್ದಿಲೈವ್/ಶಿವಮೊಗ್ಗ

ನಗರದ ವಿನೋಬ ನಗರ ರೈಲ್ವೆ ಟ್ರ್ಯಾಕ್ ನಲ್ಲಿ ಮಹಿಳೆಯೋರ್ವಳ ಶವ‌ಪತ್ತೆಯಾಗಿದ್ದು, ಮಹಿಳೆ ನಿನ್ನೆ ರಾತ್ರಿ ರೈಲಿಗೆ ಸಿಲುಕಿ ಸಾವನ್ನಾಗಿರುವ ಘಟನೆ ವರದಿಯಾಗಿದೆ. 

ನಿನ್ನೆ ರಾತ್ರಿ ತಾಳಗುಪ್ಪ-ಮೈಸೂರಿಗೆ ಚಲಿಸುವ 16228 ಕ್ರಮ ಸಂಖ್ಯೆ ರೈಲುಗಾಡಿಗೆ ಸಿಲುಕಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಮಹಿಳೆಯನ್ನ ಕಮಲಾ ಬಿ.ಪಿ ಎಂದು ಗುರುತಿಸಲಾಗಿದೆ. ರೈಲಿಗೆ ಸಿಲುಕಿದ ಮಹಿಳೆಯ ತಲೆ ದೇಹ ಮತ್ತು ಕೈಗಳು ಪ್ರತ್ಯೇಕಗೊಂಡಿದೆ

ಕಮಲಾ ಬಿ.ಪಿ (35) ಶಿವಮೊಗ್ಗದ ಮೆಗ್ಗಾನ್ ಆಸ್ತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಪತಿಯೊಂದಿಗೆ ಜಗಳವಾಡಿದ ಕಮಲಾ ರಾತ್ರಿ ರೈಲಿಗೆ ತಲೆವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ವಿನೋಬ ನಗರ ಪೊಲೀಸರು ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ದೇಹವನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close