Girl in a jacket

ಯೂಥ್ ಹಾಸ್ಟೆಲ್ ವತಿಯಿಂದ ಮೂರುದಿನ 26 ನೇ ರಾಜ್ಯಮಟ್ಟದ ಚಾರಣ



ಸುದ್ದಿಲೈವ್/ಶಿವಮೊಗ್ಗ

ಭಾರತೀಯ ಯೂಥ್ ಹಾಸ್ಟೆಲ್ ಶಿವಮೊಗ್ಗ ಘಟಕದ ವತಿಯಿಂದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ 26 ನೇ ರಾಜ್ಯಮಟ್ಟದ ಚಾರಣವನ್ನು ದಿನಾಂಕ 15 11 2024 ರಿಂದ 17 11 2024ರ ವರೆಗೆ ಕುಪ್ಪಳಿಯಲ್ಲಿ ಆಯೋಜನೆ ಮಾಡಲಾಗಿದೆ

ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ದ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್ ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಕಡಿದಾಳ್ ಪ್ರಕಾಶ್ ಇವರುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಕಡಿದಾಳ್ ಪ್ರಕಾಶ್,  ರಾಜ್ಯದ ವಿವಿಧೆಡೆಯಿಂದ ಬಂದ ಚಾರಣಿಗರಿಗೆ ರಾಷ್ಟ್ರಕವಿ ಕುವೆಂಪು ರವರು ನಡೆದಾಡಿದ ಈ ಪರಿಸರಕ್ಕೆ ಸ್ವಾತಗಿಸಿದರು. ಸುಮಾರು ೪೦೦೦ ಎಕರೆ ಕುವೆಂಪು ಜೈವಿಕಧಾಮ ದ ಸುರಕ್ಷತೆ ಎಲ್ಲರ ಹೊಣೆಯಾಗಿರಲಿ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ರಾಜ್ಯ ಘಟಕದ ಛೇರ್ಮನ್ ಶ್ರೀ ಸುದರ್ಶನ ಪೈ ರವರು ಮಾತನಾಡಿ ಜಿಲ್ಲಾ ಘಟಕಗಳು ಉತ್ತಮ ಕಾರ್ಯಕ್ರಮಗಳಿಗೆ ರಾಜ್ಯ ಘಟಕದ ಸಹಕಾರ ಸಲಹೆ ನೀಡುವುದಾಗಿ ಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳ ೮೦ ಕ್ಕೂ ಹೆಚ್ಚು ಚಾರಣಿಗರು ಭಾಗವಹಿಸಿದ್ದಾರೆ. ಶಿವಮೊಗ್ಗ  ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close