ಸುದ್ದಿಲೈವ್/ಶಿವಮೊಗ್ಗ
15 ವರ್ಷದ ಬಾಲಕಿಯರ ಗ್ರೂಪ್ ಸಿ ವಿಭಾಗದ ಕ್ರಿಕೆಟ್ ಪಂದ್ಯಾವಳಿಗೆ ಇಂದು ಬೆಳಿಗ್ಗೆ ಚಾಲನೆ ದೊರೆತಿದೆ. ನ.21 ರಿಂದ 29 ರವರೆಗೆ ನಡೆಯುವ ಈ ಪಂದ್ಯಾವಳಿಗೆ ಶಾಸಕ ಡಿ.ಎಸ್ ಅರುಣ್ ಮತ್ತು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಚಾಲನೆ ನೀಡಿದರು.
ನವುಲೆಯ ಕೆಎಸ್ ಸಿಎ ಮೈದಾನದಲ್ಲಿ 35 ಓವರ್ ಗಳ ಪಂದ್ಯಾವಳಿಯಲ್ಲಿ 6 ತಂಡ ಭಾಗಿಯಾಗಿದ್ದು ಒಟ್ಟು 15 ಪಂದ್ಯಾವಳಿಗಳು 9 ದಿನಗಳಲ್ಲಿ ನಡೆಯಲಿದೆ. ಮೈದಾನ-1 ರಲ್ಲಿ ಬಿಹಾರ್ ಮತ್ತು ಹೈದ್ರಾಬಾದ್ ಪಂದ್ಯಾವಳಿ ನಡೆಯುತ್ತಿದ್ದು, ಬಿಹಾರ್ ತಂಡ ಟಾಸ್ ಗೆದ್ದು ಮೊದಲು ಬ್ಯಾಂಟಿಂಗ್ ಆಯ್ಕೆ ಮಾಡಿಕೊಂಡಿತು.
ಮೈದಾನ-2 ರಲ್ಲಿ ಹರಿಯಾಣ ಮತ್ತು ಕೇರಳ ನಡುವೆ ಪಂದ್ಯಾವಳಿ ನಡೆಯುತ್ತಿದ್ದು, ಟಾಸ್ ಗೆದ್ದ ಹರಿಯಾಣ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೈದಾನ-3 ರಲ್ಲಿ ಜೆಎನ್ ಸಿಸಿ ನಾಗಲ್ಯಾಂಡ್ ಮತ್ತು ತಮಿಳು ನಾಡು ನಡುವೆ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ತಮಿಳು ನಾಡು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
6 ಟೀಮ್ 15 ಪಂದ್ಯಾವಳಿಗಳು ನಡೆಯುತ್ತಿದ್ದು, ಮೊಮಿತಾ ಚಕ್ರಮರ್ತಿ, ಸುನೀಲ್ ಕುಮಾರ್ ಶ್ರೀನಿವಾಸ್ ಅಡಿಗ ಸೇರಿದಂತೆ 6 ಜನ ಅಂಪೈರ್ ಗಳಿದ್ದಾರೆ. ಬೆಲ್ ಹೊಡೆತುವ ಮೂಲಕ ಪಙದ್ಯಾವಳಿಗೆ ಚಾಲನೆ ದೊರೆತಿದೆ.