Girl in a jacket

ರೈಲು ಸಂಚಾರದಲ್ಲಿ ಬದಲಾವಣೆ


 

ಸುದ್ದಿಲೈವ್/ಶಿವಮೊಗ್ಗ

ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಯ ಹಿನ್ನಲೆಯಲ್ಲಿ  ನೈಋತ್ಯ ರೈಲ್ವೆ ವಿಭಾಗ, ತನ್ನ ವಿಭಾಗದ ಕೆಲವು ರೈಲುಗಳ ಓಡಾಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕೆಲವು ರೈಲು ಸಂಚಾರ ನಿರ್ದಿಷ್ಟ ದಿನ ರದ್ದುಗೊಳಿಸಿದ್ದರೆ, ಮತ್ತೆ ಕೆಲವು ರೈಲು ಸಂಚಾರದ ಅವಧಿಯನ್ನ ರಿಷೆಡ್ಯೂಲ್‌ ಮಾಡಿದೆ. 

ಈ ಪೈಕಿ ಶಿವಮೊಗ್ಗದ ರೈಲ್ವೆ ವಿಚಾರದಲ್ಲಿ ರೈಲು ಸಂಖ್ಯೆ 16579 ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ ಸಿಟಿ ರೈಲು, ನವೆಂಬರ್ 24 ರಂದು ಪ್ರಾರಂಭವಾಗುವ ಪ್ರಯಾಣವನ್ನು ಯಶವಂತಪುರದಿಂದ 90 ನಿಮಿಷಗಳ ಕಾಲ ಮರುಹೊಂದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ರೈಲು ಸಂಖ್ಯೆ 06512 ತುಮಕೂರು-ಬಾನಸವಾಡಿ ಮೆಮು ವಿಶೇಷ ರೈಲು ನವೆಂಬರ್ 23 ರಂದು ರದ್ದುಗೊಳ್ಳುತ್ತದೆ ಎಂದು ತಿಳಿಸಲಾಗಿದ್ದು, ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ಅನ್ನು ನವೆಂಬರ್ 23 ರಂದು ರದ್ದುಗೊಳಿಸಲಾಗಲಿದೆ ಎಂದು ತಿಳಿಸಿದೆ. ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್‌ಪ್ರೆಸ್ ಅನ್ನು ನವೆಂಬರ್ 23 ರಂದು ರದ್ದುಗೊಳಿಸಲಾಗಿದೆ. 

ರೈಲು ಸಂಖ್ಯೆ 06571 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ ರೈಲು ನವೆಂಬರ್ 23 ಮತ್ತು 24 ರಂದು ದೊಡ್ಡಬೆಲೆ ಮತ್ತು ತುಮಕೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 06576 ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು ನವೆಂಬರ್ 23 ಮತ್ತು 24 ರಂದು ತುಮಕೂರು ಮತ್ತು ದೊಡ್ಡಬೆಲೆ ನಡುವೆ ಭಾಗಶಃ ರದ್ದುಗೊಳ್ಳಲಿದೆ. 

ರೈಲು ಸಂಖ್ಯೆ 06575 ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ ರೈಲು ನವೆಂಬರ್ 23 ರಂದು ದೊಡ್ಡಬೆಲೆ ಮತ್ತು ತುಮಕೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ ಎಂದು ತಿಳಿಸಿರುವ ರೈಲ್ವೆ ಇಲಾಖೆ  ರೈಲು ಸಂಖ್ಯೆ 06572 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ನವೆಂಬರ್ 23 ರಂದು ತುಮಕೂರು ಮತ್ತು ದೊಡ್ಡಬೆಲೆ ನಡುವೆ ಭಾಗಶಃ ರದ್ದುಗೊಳ್ಳಲಿದೆ ಎಂದಿದೆ

ರೈಲು ಸಂಖ್ಯೆ 17392 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 22 ರಂದು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ 20 ನಿಮಿಷಗಳ ಕಾಲ ,  ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ 30 ನಿಮಿಷಗಳ ಕಾಲ,  ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ್ ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಪ್ರಾರಂಭವಾಗುವ ಪ್ರಯಾಣ, ಮಾರ್ಗದಲ್ಲಿ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. 

ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ದಗಂಗಾ ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಪ್ರಾರಂಭವಾಗುವ ಪ್ರಯಾಣ, ಕೆಎಸ್‌ಆರ್ ಬೆಂಗಳೂರಿನಿಂದ 30 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close