Girl in a jacket

ಕೆಳದಿ ಅರಸರ ಸ್ಮಾರಕಗಳ ಸ್ವಚ್ಛತೆ


ಸುದ್ದಿಲೈವ್/ಶಿವಮೊಗ್ಗ

ಮರೆತ ಬಿದನೂರು ಚಿನ್ನದ ಸಾಮ್ರಾಜ್ಯ ನಗರಕ್ಕೆ 2 ವರ್ಷದಲ್ಲಿ ಕೆಳದಿ ಅರಸರ ಸ್ಮಾರಕಗಳ ಸ್ವಚ್ಛಗೊಳಿಸಲು ಸಾಗರದಿಂದ ಸ್ವಯಂ ಸೇವಕರು ಹೋಗಿದ್ದು ನಿರೀಕ್ಷೆಗು ಮೀರಿದ ಸ್ವಂದನೆ ದೊರೆತಿದೆ. 

ಶಿಕಾರಿಪುರ ತಾಲ್ಲೂಕಿನಿಂದ ಕೂಡ ಸಮಾಜದ ಬಾಂದವರು ಬಂದಿದ್ದು.‌ ಅವರದ ಅಭಿಮಾನ ಬೆಲೆ ಕಟ್ಟಕ್ಕಾಗದಂತೆ ಕೆಲಸ ನಡೆದಿದೆ. ಮಾತೆಯರು ಬರುವ ಮೂಲಕ ಚೆನ್ನಮ್ಮಾಜಿಯ ತವರು ಮನೆಯವರು ಸಮಾಧಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ನಗರದ ಕೆಳದಿ ಅರಸರ ಸಮಾಧಿ, ಕೊಪ್ಪಲು ಮಠದ ಕಲ್ಲಿನ ಸ್ಮಾರಕಗಳ ಸ್ವಚ್ಚಗೊಳಿಸಿ ಪೂಜೆ ಸಲ್ಲಿಸಲಾಯಿತು. ಈ ಕಾರ್ಯದಲ್ಲಿ ಸಾಗರದ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಕೆ.ವಿ ಪ್ರವೀಣ್ ವಕೀಲರು, ತಾಲ್ಲೂಕು ವೀರಶೈವ ಯುವ ವೇದಿಕೆಯ ಅಧ್ಯಕ್ಷರಾದ ವೀರುಪಾಕ್ಷಪ್ಪ ಗೌಡರು, ಚಂದ್ರಶೇಖರ, ಶೇಖರಪ್ಪಗೌಡ್ರು, ಶಶಿಕುಮಾರ್,ಹರ್ಷ, ದೀಪಕ್,ಅರುಣ್ ವಕೀಲರು.. ವಿಜಯ್ ಕುಮಾರ್, ಅಶ್ವಿನ್ ಕಡ್ಡಿಪುಡಿ..ಯಲಗಳಲೆ ಈಶ್ವರಪ್ಪಗೌಡ್ರು ಮುಂತಾದವರು ಭಾಗವಹಿಸಿದ್ದರು..

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close