Girl in a jacket

ವಕ್ಫ್ ವಿರುದ್ಧ ಪ್ರತಿಭಟನೆ, ಬಿಪಿಎಲ್ ಕಾರ್ಡ್ ರದ್ದತಿಗೆ ವಿರೋಧ, ಉಪಚುನಾವಣೆಯಲ್ಲಿನ ಜಯದ ಮತ್ತು ಸಿಎಂ ರಾಜೀನಾಮೆ ಕುರಿತು ವಿಜೇಂದ್ರ ಭರಪೂರದ ಭರವಸೆ



ಸುದ್ದಿಲೈವ್/ಶಿವಮೊಗ್ಗ

ಉಪಚುನಾವಣೆ ನೆಡೆದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 23 ಕ್ಕೆ ಚುನಾವಣೆ ಫಲಿತಾಂಶ ಘೋಷಣೆಯಾಗುತ್ತೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಸಂಡೂರು ಹಾಗೂ ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಭವಿಷ್ಯ ಹೇಳುತ್ತಿಲ್ಲ ಎಂದ ಅವರು, ಆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಅಲ್ಲಿನ ಜನರ ಭಾವನೆ ಅರ್ಥಮಾಡಿಕೊಂಡು ಹೇಳುತ್ತಿದ್ದೇನೆ. ಮೂರು ಕ್ಷೇತ್ರಗಳಲ್ಲಿ ವಿಜಯಶಾಲಿಯಾಗುತ್ತವೆ ಎಂದರು.

ಕಾಂಗ್ರೆಸ್ ಶಾಸಕರಿಗೆ  ಆಪರೇಶನ್ ಕಮಲ ಬಗ್ಗೆ ಮಾತನಾಡಿರುವ ರವಿಗಾಣಿಗರ ಬಗ್ಗೆ ಮಾತನಾಡಿದ ರಾಜ್ಯಾಧ್ಯಕ್ಷರು, ರವಿ ಗಣಿಗ ಏನ್ ಹೇಳಿದ್ದಾರೆ ಅನ್ನೊದಕ್ಕಿಂತ ಸ್ವತಃ ಮುಖ್ಯಮಂತ್ರಿಗಳೆ ಜವಾಬ್ದಾರಿ ಸ್ಥಾನದಲ್ಲಿರುವರೇ ಶಾಸಕರನ್ನ ಖರೀದಿಸುತ್ತಿದ್ದಾರೆ ಎಂದಿದ್ದಾರೆ. ನಾನು ಅವತ್ತು ಕೂಡ ಹೇಳಿದ್ದೇನೆ ಬಿಜೆಪಿ ಆಪರೇಶನ್ ಮಾಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ಅಸಮಾಧಾನ ಕುದಿಯುತ್ತಿದೆ ಎಂದರು. 

ಕ್ಷೇತ್ರದ ಅಭಿವೃದ್ಧಿ ಗೆ ಅನುಧಾನ ಸಿಗುತ್ತಿಲ್ಲ.  ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬೇಕು ಅಂತ ಹೇಳಿದ್ದ ಶಾಸಕರು ಈಗ ಸಾಕು ಅಂತ ಹೇಳುತ್ತಿದ್ದಾರೆ.  ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಆ ಪೈಪೋಟಿಯ ಪರಿಣಾಮವಾಗಿ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ನಡಿಯುತ್ತಿದೆ ಎಂದು ವಿವರಿಸಿದರು.

ಬಿಜೆಪಿಗೆ ಸರ್ಕಾರ ರಚಿಸುವಲ್ಲಿ ಆಸಕ್ತಿ ಸಹ ಇಲ್ಲ. ವಿರೋಧ ಪಕ್ಷದಲ್ಲಿ ಜನ ಕೂರಿಸಿದ್ದಾರೆ. ವಿರೋಧ ಪಕ್ಷವಾಗಿ ನಾವು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದರು‌. 

ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ತೀವ್ರ ಅಸಮಾಧಾನಗೊಂಡ ವಿಜೇಂದ್ರ, ಬಡವರ ಮೇಲೆ ಬರೆ ಎಳೆಯುವ ಕೆಲಸ ಆಗುತ್ತಿದೆ.‌ ಪಾಪಾ 15 ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ ಹಾಗೂ ಗ್ಯಾರಂಟಿ ಗೆ ಹಣ ಕ್ರೋಡೀಕರಿಸಲು ಆಗುತ್ತಿಲ್ಲ. ಹಾಗಾಗಿ ಬಡವರ ಮೇಲೆ ಬರೆ ಎಳೆದು ಗದ ಪ್ರಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಒಂದು ಕಡೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಇನ್ನೊಂದು ಕಡೆ ಬಿಪಿಎಲ್ ಕಾರ್ಡ್ ಕಟ್ ಮಾಡುತ್ತಿದ್ದು, ಗ್ಯಾರಂಟಿ ಗಳಿಗೆ ಹಣ ಕ್ರೋಡೀಕರಿಸಲು ಈ ರೀತಿಯ ವಿಚಾರಗಳಿಗೆ ಕೈ ಹಾಕುತ್ತಿದ್ದಾರೆ. ಸರ್ಕಾರವನ್ನು ಬಡವರ ಕ್ಷೇಮಿಸುವುದಿಲ್ಲ ಎಂದು ದೂಷಿಸಿದರು. 

ವಕ್ಫ್ ವಿಚಾರದಲ್ಲೂ ಸಹ ನೀವು ನೋಡುತ್ತಿದ್ದೀರಾ, ರಾಜ್ಯದಲ್ಲಿ ಹಿಂದೂಗಳ ಭಾವನೆ ಕೆರಳಿಸಲಾಗುತ್ತಿದೆ.  ಇನ್ನೊಂದು ಕಡೆ ರೈತರ ಜಮೀನುಕಿತ್ತು ಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಜೆಪಿ ಈ ವಿಚಾರವನ್ನು ಗಂಭೀರವಾಗಿ ತಗೆದುಕೊಂಡಿದೆ. ನ.21  ನೇ ತಾರೀಖಿನಿಂದ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. 

ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಮೂರು ತಂಡಗಳಲ್ಲಿ ಪ್ರವಾಸ ಮಾಡುತ್ತಿದ್ದೇವೆ.ವಾಸ್ತವಿಕ ಸತ್ಯ ಮರೆಮಾಚುವ ಕೆಲಸ ಪ್ರಿಯಾಂಕ ಖರ್ಗೆ ಅವರು ಮಾಡುತ್ತಿದ್ದಾರೆ. ಸತ್ಯ ಏನು ಎಂದರೆ ಕಾಂಗ್ರೆಸ್ ಪಕ್ಷದಲ್ಲಿ ಕುದುರೆ ವ್ಯಾಪಾರ ಶುರುವಾಗಿದೆ. ಎಷ್ಟು ಶಾಸಕರಕನ್ನು ದುಡ್ಡು ಕೊಟ್ಟು ಖರೀದಿ ಮಾಡಬಹುದು ಅಂತ ಕಾಂಗ್ರೆಸ್ ನಲ್ಲಿ ಪೈಪೋಟಿ ಶುರುವಾಗಿದೆ ಎಂದರು. 

ಗೊಂದಲ ಇರೋದು ಕಾಂಗ್ರೆಸ್ ಪಕ್ಷದಲ್ಲಿ ವಿನಃ ಬಿಜೆಪಿಯಲ್ಲಿಯಲ್ಲ, 50 ಕೋಟಿ ಕೊಟ್ತಾರೋ 100 ಕೋಟಿ ಕೋಡ್ತಾರೋ ಆ ಪಕ್ಷದಲ್ಲಿ ಇರುವ ಘಟಾನುಘಟಿಗಳಿಗೆ ಬಿಟ್ಟಿದ್ದು. ಬಿಜೆಪಿ ಗೆ ಯಾವುದೇ ರೀತಿಯ ಸಂಬಂಧ ಇಲ್ಲ. ಸಿದ್ದರಾಮಯ್ಯನವರು ರಾಜಕೀಯವಾಗಿ ದೂರ ಉಳಿಯುವ ದಿನಗಳು ಹತ್ತಿರವಾಗಿದೆ. ರಾಜೀನಾಮೆ ಕೊಡುವ ದಿನ ಹತ್ತಿರ ಆಗಿರೋ ಹಿನ್ನೆಲೆ ಕುದುರೆ ವ್ಯಾಪಾರ ಶುರುವಾಗಿದೆ. ಮುಖ್ಯಮಂತ್ರಿ ಗಳು ಮುಕ್ತವಾಗಿ ಹೇಳುತ್ತಿಲ್ಲ ಅಷ್ಟೇ ಎಂದರು. 

ಮುಡಾ ಹಗರಣದ ಕುರಿತು ನಿಕ್ಷೇಪಕ್ಷವಾಗಿ ತನಿಖೆ ಆಗಬೇಕು. ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಹಣೆ ಬರಹ ರಾಜ್ಯದ ಜನರಿಗೆ ಗೊತ್ತಾಗಿದೆ. ಮೂರು ತಂಡಗಳಲ್ಲಿ ಯಾರಿದ್ದಾರೆ ಎಂಬುದನ್ನು ನಾವು ಬಹಿರಂಗ ಪಡಿಸಿದ್ದೇವೆ. ರೈತರ ಪರವಾಗಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಬಿಜೆಪಿ ಮೂರು ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಜೊತೆಗೆ ನಾವಿದ್ದೇವೆ ಎಂಬ ಭರವಸೆ ತುಂಬಲಿದ್ದೇವೆ. ರೈತರ ಭೂಮಿಯನ್ನು ವಕ್ಫ್ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close