ಕಂದಾಯ ಇಲಾಖೆಯಿಂದ ಉಪವಿಭಾಗಾಧಿಕಾರಿ ಸತ್ಯನಾರಾಯಣ ಗೆಲುವು


ಸುದ್ದಿಲೈವ್/ಶಿವಮೊಗ್ಗ

ಸರ್ಕಾರಿ ನೌಕರರ ವಲಯದಲ್ಲಿ ತೀವ್ರ ಕುತೂಹಲ ಕೆರಳಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ೩೦ ನಿರ್ದೇಶಕರ ಸ್ಥಾನಕ್ಕೆ ಶನಿವಾರ ಸಂಜೆಯವರೆಗೂ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಹುತೇಕ ಇಲಾಖೆಗಳಲ್ಲಿ ಅಚ್ಚರಿ ಫಲಿತಾಂಶ ಪ್ರಕಟವಾಗಿವೆ.

ವಿಶೇಷವಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕಂದಾಯ ಇಲಾಖೆಯಲ್ಲಿ ಸತ್ಯನಾರಾಯಣ ಅವರು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿ ಸ್ಪರ್ಧಿ ತಹಸೀಲ್ದಾರ್‌ ಗಿರೀಶ್‌ ಅವರು ವಿರುದ್ದ ಒಂದು ಮತದಿಂದ ವಿಜಯಶಾಲಿಯಾಗಿ, ನೌಕರರ ಜಿಲ್ಲಾ ಘಟಕಕ್ಕೆ ಎಂಟ್ರಿಯಾಗಿದ್ದಾರೆ. ಇನ್ನು ಗಿರೀಶ್ ಬಿ (ಕೃಷಿ ಇಲಾಖೆ ), ದೀಪಕ್ ಪಿ.ಎಸ್(  ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ), ಕಿರಣ್ ಎಚ್ (ಜಿಲ್ಲಾ ಪಂಚಾಯತ್), ಪ್ರವೀಣ್ ಕುಮಾರ್ ಜಿ ( ತಾಲೂಕು ಪಂಚಾಯಿತ್),  ಮಧುಸೂದನ್ (ಅಬಕಾರಿ ಇಲಾಖೆ),ಕೊಟ್ರೇಶ್( ಸಮಾಜ ಕಲ್ಯಾಣ ಇಲಾಖೆ), ಅನಿತಾ ವಿ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ), ರಂಗನಾಥ್ ( ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ), ಸತ್ಯಭಾಮ ಎಸ್ ಜಿ (ಮೀನುಗಾರಿಕೆ ಇಲಾಖೆ), ರಾಜು ಲಿಂಬು ಚೌಹಣ್‌ ( ಅರಣ್ಯ ಇಲಾಖೆ), ಡಾ.ಗುಡದಪ್ಪ ಕಸಬಿ (ಆರೋಗ್ಯ ಇಲಾಖೆ),ಡಾ ಸಿ ಎ ಹಿರೇಮಠ್ (ಆಯುಷ್ ಇಲಾಖೆ) ಮಹೇಶ ಪಿಎಲ್ ( ಇಎಸ್‌ ಐ), ರಮೇಶ್ ಎಸ್ ವೈ ( ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ) ಗೆಲುವು ಸಾಧಿಸಿದ್ದಾರೆ. 

ಹಾಗೆಯೇ ಮಹೇಶ್ ಕೆಎಚ್ (ಗ್ರಂಥಾಲಯ ಇಲಾಖೆ),  ಲಿಂಗಪ್ಪ ಮತ್ತು ಧರ್ಮಪ್ಪ (ಪ್ರೌಢಶಾಲಾ ವಿಭಾಗ), ಶಶಿಧರ್ ಡಿ ಟಿ(ಪದವಿ ಪೂರ್ವ ಶಿಕ್ಷಣ) ಧನ್ಯ ಕುಮಾರ್ (ಪ್ರಥಮ ದರ್ಜೆ ಕಾಲೇಜು), ಹನುಮಂತಪ್ಪ ಜಿ (ಮಹಿಳಾ ಪಾಲಿಟೆಕ್ನಿಕ್ ), ಅಣ್ಣಪ್ಪ ವಿ ಬಿ ( ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ), ರವಿಕಿರಣ್ ವೈ (ಗಣಿ ಮತ್ತು ಭೂ ವಿಜ್ಞಾನ ಇಲಾಖೆ),  ಚನ್ನಕೇಶವ ಮೂರ್ತಿ (ಭೂಮಾಪನ ಮತ್ತು ಕಂದಾಯ ಇಲಾಖೆ) ಸುಬ್ರಮಣ್ಯ ಜಾದವ್ ( ಶಾಲಾ ಶಿಕ್ಷಣ ಇಲಾಖೆ) ಜತೆಗೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸ್ಪತ್ರೆ ಮತ್ತು ಇತರ ಇಲಾಖೆಗಳು ಕ್ಷೇತ್ರದಿಂದ ವಿಜಯ್ ಅಂಟೊ ಸಗಾಯ್, ಅಶೋಕ ಟಿಜಿ ಮತ್ತು  ನರಸಿಂಹ ಕೆ ಆಯ್ಕೆಯಾಗಿದ್ದಾರೆ.

ರಾಜ್ಯ ಸರ್ಕಾರಿ‌ ನೌಕರರ ಸಂಘದ ಜಿಲ್ಲಾ‌ಶಾಖೆಯ ೬೮ ನಿರ್ದೇಶಕರ ಸ್ಥಾನಗಳ ಪೈಕಿ  ಈಗಾಗಲೇ‌  ೩೮ ಜನ ಅವಿರೋಧವಾಗಿ ಆಯ್ಕೆ ಯಾಗಿದ್ದು, ಉಳಿದ ೩೦ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮತದಾನಕ್ಕೆ ೧೧ ಬೂತ್ ಗಳನ್ನ ನಿರ್ಮಿಸಲಾಗಿತ್ತು. 25 ಇಲಾಖೆಯಲ್ಲಿ 28 ಜನ ಆಯ್ಕೆ ಆಗಬೇಕಿದ್ದು 70 ಜನ ಸ್ಪರ್ಧಾಳುಗಳು ಕಣದಲ್ಲಿದ್ದರು. ಬೆಳಿಗ್ಗೆ 9 ಗಂಟೆಯಿಂದ ಮತದಾನ ಶುರುವಾಗಿ, ಸಂಜೆ 4 ಗಂಟೆಗೆ ಮುಕ್ತಾಯಗೊಂಡಿತು. ೪.೩೦ ರಿಂದ ಮತ ಎಣಿಕೆ ಶುರುವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close