Girl in a jacket

ಹಿನ್ನೀರಿನಲ್ಲಿ ಮುಳುಗಿದ್ದ ಯುವಕರ ಶವ ಪತ್ತೆ



ಸುದ್ದಿಲೈವ್/ಶಿವಮೊಗ್ಗ 

ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ನಾಪತ್ತೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರ ಮೃತದೇಹ ಪತ್ತೆಯಾಗಿದೆ. ಕಳಸವಳ್ಳಿ ಸಮೀಪ ಶರಾವತಿ ಹಿನ್ನೀರಿನಲ್ಲಿ ಹೊಳೆ ಊಟಕ್ಕಾಗಿ ತೆರಳಿದ್ದ ವೇಳೆ ತೆಪ್ಪ ಮಗುಚಿ ನೀರಲ್ಲಿ ಮುಳುಗಿ  ಯುವಕರು ನಾಪತ್ತೆಯಾಗಿದ್ದರು. 

ಸಾಗರ ತಾಲೂಕಿನ ಕಳಸವಳ್ಳಿ ಬಳಿ ಶರಾವತಿ ಹಿನ್ನೀರಿನಲ್ಲಿ ಸುಮಾರು 40 ಆಳದಲ್ಲಿ ಮೂವರು ಯುವಕರ ಶವ ಪತ್ತೆಯಾಗಿದೆ. 

ಈಶ್ವರ ಮಲ್ಪೆ ತಂಡದಿಂದ ಮೃತದೇಹಗಳ ಶೋಧ

ಕಳಸವಳ್ಳಿ ಸಮೀಪ ಶರಾವತಿ ಹಿನ್ನೀರಿನ ನಡುಗಡ್ಡೆಯಲ್ಲಿ ಊಟಕ್ಕೆ ತೆರಳಿದ್ದ ಐವರು ಯುವಕರ ಪೈಕಿ, ತೆಪ್ಪ ಮಗುಚಿದ್ದ ವೇಳೆ ಮೂವರು ನಿನ್ನೆ ಸಂಜೆ ಕಣ್ಮರೆಯಾಗಿದ್ದರು.

ಚೇತನ್ ಜೈನ್ ಸಿಗಂದೂರು(28),  ಸಂದೀಪ್ ಹುಲಿದೇವರಬನ(30) ಹಾಗೂ ರಾಜೀವ್ ಗಿಣಿವಾರ(34) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸ್ ಹಾಗೂ ಆಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗಿತ್ತು. ರಾತ್ರಿಯಾದ್ದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. 

ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಯುವಕರ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ನೀರಿನಾಳದಲ್ಲಿ ಇದ್ದ ಮೂವರು ಯುವಕರ ಶವವನ್ನ ಪತ್ತೆ ಮಾಡಲಾಗಿದೆ. ಮೃತದೇಹವನ್ನ ಪೋಸ್ಟ್ ಮಾರ್ಟಮ್ ಮಾಡಲಾಗುತ್ತಿದ್ದು. ಶವದ ಮರಣೋತ್ತರ ಪರೀಕ್ಷೆಗೆ ಸ್ಥಳದಲ್ಲೇ ವ್ಯವಸ್ಥೆ ಮಾಡುವ ಸಾಧ್ಯತೆಇದೆ.

ಸ್ಥಳೀಯರ ಮನವಿ ಹಿನ್ನೆಲೆ ಸಾಗರ ತಾಲೂಕು ಆಸ್ಪತ್ರೆ ಬದಲಾಗಿ, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪೋಸ್ಟ ಮಾರ್ಟಂ ನಙತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ತಾಲೂಕು ಆಡಳಿತ ವ್ಯವಸ್ಥೆ ಮಾಡಿಕೊಂಡಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close