ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಸೌಂದರ್ಯ ಲಹರಿ ಶಿಕ್ಷಕಿ ಎಂದೇ ಹೆಸರುವಾಸಿಯಾಗಿದ್ದ ಜಯಲಕ್ಷ್ಮೀ ಶಿವಸ್ವಾಮಿ ನಿಧನರಾಗಿದ್ದಾರೆ. ಇವರಿಗೆ 79 ವರ್ಷ ವಯಸ್ಸಾಗಿತ್ತು.
ಜಯಲಕ್ಷ್ಮ್ಮೀ ಶಿವಸ್ವಾಮಿ ಕೋಟೆ ನಿವಾಸಿಯಾಗಿದ್ದರು. ಆದಿ ಶಂಕರಾಚಾರ್ಯರ ರಚನೆಯ ಸೌಂದರ್ಯ ಲಹರಿಯನ್ನ ಹೇಳಿಕೊಡುವವರೆ ಕಡಿಮೆಯಾದ ಈ ದಿನಗಳಲ್ಲಿ ಜಯಲಕ್ಷ್ಮಿ ಶಿವಸ್ವಾಮಿ ಅವರ ಸಾಧನೆ ಶಿವಮೊಗ್ಗದ ಜನತೆ ಮರೆಯುವ ಹಾಗಿಲ್ಲ. ಫಲಾಪಕ್ಷೆ ಇಲ್ಲದೆ ಹೇಳಿಕೊಡುತ್ತಿದ್ದ ಇವರು ಇಂದು ಮನೆಯಲ್ಲೇ ಅಸು ನೀಗಿದ್ದಾರೆ. ಯಾರು ಬಂದು ಕೇಳಿಕೊಂಡರು ಸೌಂದರ್ಯ ಲಹರಿಯನ್ನ ಹೇಳಿಕೊಟ್ಟು ಮನೆಮಾತಾಗಿದ್ದರು. ಇವರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಸೌಂದರ್ಯ ಲಹರಿ ಸಪ್ತಾಹಗಳನ್ನ ನಡೆಸಿಕೊಡುತ್ತಿದ್ದರು.
ಅನಾರೋಗ್ಯದ ಹಿನ್ನಲೆಯಲ್ಲಿ ಜಯಲಕ್ಷ್ಮಿ ಶಿವಸ್ವಾಮಿ ಇಂದು ಕೊನೆ ಉಸಿರು ಎಳೆದಿದ್ದಾರೆ. ಮಗ ರಂಜಿತ್ ನನ್ನ ಅಗಲಿದ್ದಾರೆ. ರೋಟರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯ ಕ್ರಿಯೆ ನಡೆಯಲಿದೆ.