ಸುದ್ದಿಲೈವ್/ಶಿರಾಳಕೊಪ್ಪ
ವಿವಾಹಿತ ಮಹಿಳೆಯ ಮೇಲೆ ಕಣ್ಣು ಹಾಕಿ ಆಕೆಯನ್ನ ಬಲತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಪಂಚಾಯತಿ ನಡೆಸಿದ ಪತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿರಾಳಕೊಪ್ಪದ ರಾಗಿಕೊಪ್ಪದಲ್ಲಿ ನಡೆದಿದೆ.
ರಾಗಿಕೊಪ್ಪದಲ್ಲಿ 30 ವರ್ಷದ ವಿವಾಹಿತ ಮಹಿಳೆಯ ಪತಿ ಕೆಲಸದ ಮೇಲೆ ದೆಹಲಿಗೆ ಹೋಗುತ್ತಿದ್ದು ದೆಹಲಿಗೆ ಹೋದರೆ ಇವರು ಮನೆಗೆ 15 ದಿನಗಳ ವರೆಗೆ ಬರುತ್ತಿರಲಿಲ್ಲ. ಇದನ್ನ ದುರುಪಯೋಗ ಪಡಿಸಿಕೊಳ್ಳುವ ಯೋಜನೆಯಲ್ಲಿದ್ದ ಎದುರಿನ ಮನೆಯ 38 ವರ್ಷದ ವ್ಯಕ್ತಿ ವಿವಾಹಿತ ಮಹಿಳೆಯ ಮೇಲೆ ಕಣ್ಣು ಹಾಕಿದ್ದಾನೆ.
ಮನೆ ಬಿಟ್ಟು ಹೊರ ಬರುವ ಮಹಿಳೆಗೆ ಕೆಟ್ಟ ದೃಷ್ಠಿಯಿಂದ ನೋಡುವುದು ಮಕ್ಕಳನ್ನ ಶಾಲೆಗೆ ಕಳುಹಿಸುವಾಗ ಹುಬ್ಬೇರಿಸುವುದನ್ನ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಮಹಿಳೆ ನಿರ್ಲಕ್ಷಿಸಿದ್ದರು. ಆದರೆ ನ.28 ರಂದು ಮಕ್ಕಳು ಮನೆಯ ಎದುರು ಆಡುತ್ತಿದ್ದು ಅವರನ್ನ ಮನೆಯ ಒಳಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ವಿವಾಹಿತ ಮಹಿಳೆಯ ಮನೆಯ ಒಳಗೆ ವ್ಯಕ್ತಿ ನುಗ್ಗಿದ್ದಾನೆ.
ಮಹಿಳೆಯನ್ನ ಗಟ್ಟಿಯಾಗಿ ಹಿಡಿದುಕೊಂಡಾಗ ಮಹಿಳೆ ಕಿರುಚಿದ ಕಾರಣ ಅಕ್ಕಪಕ್ಕದ ಜನ ಸೇರಿದ್ದಾರೆ. ತಕ್ಷಣವೇ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಕುರಿತು ಸೇವಾಲಾಲ್ ದೇವಸ್ಥಾನದಲ್ಲಿ ತೀರ್ಮಾನ ನಡೆಸಲಾಗಿತ್ತು. ಆದರೆ ಮಹಿಳೆಯಪತಿ ದೆಹಲಿಯಿಂದ ವಾಪಾಸ್ ಆಗಿದ್ದು ತೀರ್ಮಾನದ ಸಭೆಯಲ್ಲಿ ಭಾಗಿಯಾಗಿದ್ದರು.
ಆದರೆ ಪಂಚಾಯಿತಿಯಲ್ಲಿ ನಿನ್ನ ಹೆಂಡತಿಯನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾಗದೆ ಪಂಚಾಯಿತಿಗೆ ಬಂದಿದ್ದೀಯ ಎಂದು ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಐವರ ವಿರುದ್ಧ ಶಿರಾಳಕೊಪ್ಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.