ಈಶ್ವರಪ್ಪನವರ ವಿರುದ್ಧ ಕ್ರಮಕ್ಕೆ ಎಸ್ ಡಿಪಿಐ ಆಗ್ರಹ



ಸುದ್ದಿಲೈವ್/ಶಿವಮೊಗ್ಗ

ಪದೆ ಪದೆ ಶಿವಮೊಗ್ಗದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತುರುವ ಮಾಜಿ ಡಿಸಿಎಂ ಈಶ್ವರಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಎಸ್ ಡಿಪಿಐ ಆಗ್ರಹಿಸಿದೆ. 

ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಷಣ ಮಾಡಿ ಶಾಂತಿಯುತವಾಗಿರುವ ಶಿವಮೊಗ್ಗದ ಸ್ವಾಸ್ಥ್ಯ ಹಾಳು ಮಾಡಲು ಹೊರಟಿರುವ ಮಾಜಿ ಡಿಸಿಎಂ ಈಶ್ವರಪ್ಪಗೆ ಕಾನೂನು ಪಾಠ ಕಲಿಸುವುದು ಯಾವಾಗ ಎಂದು SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸಾಕ್ ಆಗ್ರಹಿಸಿದ್ದಾರೆ.

ಇದೇ ರೀತಿಯ ಕೋಮು ದ್ವೇಷ ಹರಡಿಸುವ ಪ್ರಚೋದನಕಾರಿ ಹೇಳಿಕೆ ಭಾಷಣಗಳಿಂದ ಶಾಂತಿ ಬಯಸುವ ನಾಗರಿಕರಲ್ಲಿ ಅಶಾಂತಿ ಮೂಡಿಸಲು ಈಶ್ವರಪ್ಪನವರು ಯತ್ನಿಸುತ್ತಿದ್ದಾರೆ.  ಕೋಮು ವಿಷಬೀಜ ಹಾಕಿ ರಾಜಕೀಯ ಲಾಭ ಪಡೆಯುವ ಈಶ್ವರಪ್ಪರಿಗೆ ಸರಿಯಾದ ಕಾನೂನು ಪಾಠ ಕಲಿಸಬೇಕೆಂದು ಆಗ್ರಹಿಸಿದ್ದಾರೆ.

ಅವರ ಅಶಾಂತಿ ಭಾಷಣ ಮಾಡಿದರೂ, ಅವರನ್ನ ಬಂಧಿಸಲು ರಕ್ಷಣ ಇಲಾಖೆ ವಿಫಲವಾಗಿರುವುದು ಎದ್ದುತೋರುತ್ತಿದೆ. ಪದೆ ಪದೆ ಭಾಷಣಕ್ಕೆ ಅವಕಾಶ ನೀಡುವ ಮೂಲಕ ಪ್ರಚೋದನಾ ಭಾಷಣಕಗಕೆ ಅವಕಾಶ ನೀಡಲಾಗಿದೆ. ಕೋಡಲೇ ಇಂತಹ ಸಮಾಜದಲ್ಲಿ ಬಿರುಕು ಉಂಟುಮಾಡುವ ಕೋಮು ದ್ವೇಷ ಹರಡಿಸುವ ಈಶ್ವರಪ್ಪಗೆ ಕೂಡಲೇ ಬಂಧಿಸಿ ಶಾಂತಿ ಕಾಪಾಡುವಂತೆ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close